ಸುದ್ದಿಲೈವ್/ಶಿವಮೊಗ್ಗ
ಶಿರಾಳಕೊಪ್ಪದ ಪಿಎಸ್ ಐ ರಮೇಶ್ ಅವರನ್ನ ಅಮಾನತ್ತುಗೊಳಿಸಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಆದೇಶಿಸಿದ್ದಾರೆ.
ಶಿರಾಳಕೊಪ್ಪದ ಪಿಎಸ್ ಐ ರಮೇಶ್ ಅವರನ್ನ ನಿನ್ನೆ ಅಮಾನತ್ತುಗೊಳಿಸಿರುವ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಸುದ್ದಿಲೈವ್ ಗೆ ಸ್ಪಷ್ಟಪಡಿಸಿದ್ದಾರೆ. ಆದರೆ ಯಾವ ಆರೋಪದ ಅಡಿ ಅಮಾನತ್ತು ಎಂಬುದರ ಬಗ್ಗೆ ತಿಳಿದು ಬರಬೇಕಿದೆ.
ಗೋಹತ್ಯೆ ಪ್ರಕರಣದಲ್ಲಿ ಇವರನ್ನ ಅಮಾನತ್ತುಗೊಳಿಸುವಂತೆ ನಾಲ್ಕೈದು ದಿನಗಳ ಹಿಂದೆ ಹಿಂದೂ ಜಾಗರಣವೇದಿಕೆ ಮನವಿ ನೀಡಿ ಅಮಾನತ್ತುಗೊಳಿಸುವಂತೆ ಮನವಿ ನೀಡಿತ್ತು. ಶಿರಾಳಕೊಪ್ಪದಲ್ಲಿ ಬಕ್ರೀದ್ ಹಬ್ಬದ ವೇಳೆ ಗೋಹತ್ಯೆಗಳು ನಡೆದರೂ ಕ್ರಮ ಜರುಗಿಸಿಲ್ಲ ಎಂಬ ಆರೋಪವನ್ನ ಹಿಂಜಾವೇ ಮಾಡಿತ್ತು.
ಆದರೆ ಅವರ ಅಮಾನತ್ತಿನ ಹಿಂದೆ ಭಷ್ಠಾಚಾರದ ಆರೋಪವೂ ಕೇಳಿಬಂದಿದೆ. ಹಣದ ಬೇಡಿಕೆ ಇಟ್ಟ ವಾಯ್ಸ್ ರೆಕಾರ್ಡಿಂಗ್ ನ್ನ ಐಜಿಗೆ ಕಳುಹಿಸಲಾಗಿದ್ದು ಈ ಹಿನ್ನಲೆಯಲ್ಲಿ ಶಿರಾಳಕೊಪ್ಪ ಠಾಣೆಯ ಪಿಎಸ್ಐ ಅಮಾನತ್ತಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿದೆ.
ಇದನ್ನೂ ಓದಿ-https://suddilive.in/archives/19158