ಯುದ್ಧ ಟ್ಯಾಂಕರ್ ಏನಾಗಲಿದೆ, ಗಾಂಧಿ ಬಜಾರ್ ನ ಸಂತೆ ಶೀಘ್ರದಲ್ಲಿಯೇ ಶಿಫ್ಟ್-ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವಾರು ವಿಷಯ ಚರ್ಚೆ

ಸುದ್ದಿಲೈವ್/ಶಿವಮೊಗ್ಗ

ಇಂದು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ  ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ಈ ಸಭೆಯಲ್ಲಿ ಶಾಸಕ ಚೆನ್ನಬಸಪ್ಪ  ಭಾಗವಹಿಸಿ‌ ಚರ್ಚಿಸಿದರು.

ಡೇಂಗೇ, ರುದ್ರಭೂಮಿ, ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದ ಅಂಡರ್ ಪಾಸ್, ಬಜಾರ್ ನಲ್ಲಿ ನಡೆಯುವ ಮಂಗಳವಾರ ಸಂತೆಯನ್ನ ಶಿಫ್ಟ್ ಮಾಡುವ ಬಗ್ಗೆ, ಬೀದಿ ನಾಯಿ ಹಾವಳಿಯ ಬಗ್ಗೆ ಕ್ರಮ ಕೈಗೊಳ್ಳುವ ಹಾಗೂ ಇನ್ನೂ ಹಲವು ಸಮಸ್ಯೆಗಳ ಬಗ್ಗೆ ಶಾಸಕರು ಸೂಚನೆ ನೀಡಿದರು.

1. ಶಿವಮೊಗ್ಗ ನಗರದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಜ್ವರದ ಕುರಿತಂತೆ ಕ್ರಮವಹಿಸುವಂತೆ ಸೂಚಿಸಿ, ದಿನನಿತ್ಯ ಫಾಗಿಂಗ್ ವ್ಯವಸ್ಥೆ, ಸ್ಪ್ರೇ ಸಿಂಪಡಣೆ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಆರೋಗ್ಯ ಅಧಿಕಾರಿಗೆ ಸೂಚಿಸಿದರು.

2. ಶಿವಮೊಗ್ಗ ನಗರದ ಗೋಪಾಲ, ಬೊಮ್ಮನಕಟ್ಟೆ, ಗಾಡಿಕೊಪ್ಪ ಹಾಗೂ ಸೋಮಿನಿಕೊಪ್ಪದ ಹೊರವಲಯ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರುದ್ರಭೂಮಿಗೆ ಪ್ರತ್ಯೇಕ ಜಾಗ ಹಾಗೂ ಮೂಲಸೌಕರ್ಯಕ್ಕಾಗಿ ಕ್ರಮ ವಹಿಸುವಂತೆ ಸೂಚಿಸಿದರು.

3. ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯ ರುದ್ರ ಭೂಮಿಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದರು.

4. ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆಯ ಬಳಿ ಇರುವ ಅಂಡರ್ ಪಾಸ್ ಅನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯಲು ಸೂಚಿಸಿದ್ದಾರೆ. ಈ ಸೂಚನೆ ನಡುವೆಯೇ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದು ನಂತರದ ದಿನಗಳಲ್ಲಿ ಆರಂಭವಾಗಲಿದೆ.

5. ಶಿವಮೊಗ್ಗ ನಗರದಲ್ಲಿ ಬೀದಿ ನಾಯಿಗಳಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ನಾಯಿಗಳ ಹಾವಳಿ ಕುರಿತು ಡಾ.ರೇಖಾ ಮೇಡಂ ಸಭೆಗೆ ಸಂಪೂರ್ಣ ಮಾಹಿತಿ ನೀಡಿದರು.

6. ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯನ್ನು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಬಳಿ ಇರುವ ಸಂತೆ ಮೈದಾನಕ್ಕೆ ಸ್ಥಳಾಂತರಿಸಲು ಆದೇಶಿಸಿದರು.

7. ಶಿವಮೊಗ್ಗ ನಗರದ ಹೂವಿನ ಮಾರುಕಟ್ಟೆಯನ್ನು ಬಸ್ ಸ್ಟ್ಯಾಂಡ್ ನಿಂದ ಬಿ.ಹೆಚ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

8. ಪೌರಕಾರ್ಮಿಕರ ಭವನ ಮತ್ತು ಪೌರಕಾರ್ಮಿಕರಿಗೆ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ, ಉದ್ಘಾಟಿಸಲು ಸೂಚಿಸಲಾಯಿತು.

9. ಶಿವಮೊಗ್ಗ ನಗರದಲ್ಲಿರುವ ಬೀದಿ ದೀಪಗಳ ಸಮಸ್ಯೆಗಳ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

10. ನಗರದ ಹೊರವಲಯದಲ್ಲಿರುವ ತಂಬಾಕು ಗೋಡನನ್ನು ಗೋಶಾಲೆಗೆ ನೀಡುವಂತೆ ಸರ್ಕಾರಗೆ ಪ್ರಸ್ತಾವನೆ ಕಳಿಸಲು ಸೂಚಿಸಲಾಯಿತು.
11. ಎಂಆರ್‌ಎಸ್ ಸರ್ಕಲ್ ನಲ್ಲಿ ಯುದ್ಧ ಟ್ಯಾಂಕರ್ ಸ್ಥಾಪಿಸುವ ಕುರಿತಂತೆ ಚರ್ಚಿಸಲಾಯಿತು.

ಆತುರಕ್ಕೆ ಮಿಲ್ಟ್ರಿ ಟ್ಯಾಂಕರ್ ತಂದು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆಸಲಾಗಿದೆ. ಆದರೆ ಇಲ್ಲೊಂದು ಫ್ಲೈ ಓವರ್ ಬರಲಿದೆ. ಅಲ್ಲದೆ ಎನ್ ಹೆಚ್ ನಲ್ಲಿ ಈ ಎಲ್ಲಾ ಮಾನ್ಯುಮೆಂಟ್ಸ್ ಪುತಳಿಗೆ ಅವಕಾಶ ವಿಲ್ಲದ ಕಾರಣ ಟ್ಯಾಂಕರ್ ಇಡಲು ಅವಕಾಶವಿಲ್ಲದಂತಾಗಿದೆ. ಈ ಕುರಿತು ಎನ್ ಹೆಚ್ ಅಧಿಕಾರಿಯ ಜೊತೆ ಮುಂದಿನ ವಾರ ಶಾಸಕರು ಮತ್ತು ಪಾಲಿಕೆ ಅಧಿಕಾರಿಗಳು ಸಭೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ-https://suddilive.in/archives/18295

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close