ಸುದ್ದಿಲೈವ್/ಶಿವಮೊಗ್ಗ
ವಿಶ್ವ ಹಿಂದೂ ಪರಿಷದ್, ಧರ್ಮ ಪ್ರಸಾರ ವಿಭಾಗ, ಶಿವಮೊಗ್ಗ ನಗರ ವತಿಯಿಂದ. ಕೂಡಲಿ ಶ್ರೀಗಳ ನೇತೃತ್ವದಲ್ಲಿ ಸಂತರ ಪಾದಯಾತ್ರೆ ನಡೆದಿದೆ.
ಹಿಂದೂ ಸಮಾಜದಲ್ಲಿ
ಸಾಮರಸ್ಯವನ್ನು ತರುವ ನಿಟ್ಟಿನಲ್ಲಿ
ಈ ಪಾದಯಾತ್ರೆ ಯನ್ನು ಶಿವಮೊಗ್ಗ ನಗರದ ಗೋಪಾಳದ ಮಲ್ಲಿಕಾರ್ಜುನ ಬಡಾವಣೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಿಂದ ಆರಂಭಗೊಂಡಿತ್ತು. .
ಶ್ರೀ ಕ್ಷೇತ್ರ ಕೂಡಲಿ ಸಂಸ್ಥಾನದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಹತ್ತಾರು ಮನೆಗಳಿಗೆ ಭೇಟಿ ನೀಡಿ, ಪಾದಯಾತ್ರೆಯ ಬಗ್ಗೆ ಜಾಗೃತಿ ಮೂಡಿಸಿದರು., ನಂತರ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪ್ರಾಂತದ ಧರ್ಮ ಪ್ರಸಾರ ಪ್ರಮುಖ್ ಶ್ರೀ ಸುನಿಲ್, ಜಿಲ್ಲಾ ಅಧ್ಯಕ್ಷರಾದ ಶ್ರೀ ವಾಸುದೇವ್ ಜೆ ಆರ್, ಜಿಲ್ಲಾ ಉಪಾಧ್ಯಕ್ಷರಾದ ನಟರಾಜ್ ಬಜರಂಗದಳ ಶಿವಮೊಗ್ಗ ವಿಭಾಗ ಸಂಯೋಜಕ ರಾಜೇಶ್ ಗೌಡ ಜಿಲ್ಲಾ ಧರ್ಮ ಪ್ರಸಾರ ಪ್ರಮುಖ ಜಿತೇಂದ್ರ ಗೌಡ
ಜಿಲ್ಲಾ ಕಾರ್ಯದರ್ಶಿಗಳಾದ ನಾರಾಯಣ ಮತ್ತು ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ-https://suddilive.in/archives/19209