ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಸಂಚಾರಿ ನಿಯಮಗಳನ್ನ ವಾಹನ ಚಲಾಯಿಸುವವರು ಪಾಲಿಸುತ್ತಿಲ್ಲ. ಪೊಲೀಸರು ಸಹ ಪಾಲಿಸುತ್ತಿಲ್ಲವೆಂಬುದಕ್ಕೆ ಹಲವು ಉದಾಹರಣೆಗಳು ಲಭ್ಯವಾಗುತ್ತಿದೆ.
ನೋ ಪಾರ್ಕಿಂಗ್ ನಲ್ಲಿ ಪಾರ್ಕಿಂಗ್ ಮಾಡುವುದು. ಏಕ ಮುಖ ಸಂಚಾರದಲ್ಲಿಯೇ ದ್ವಿಮುಖ ಸಂಚಾರ ಮಾಡುವುದು. ಹೆಲ್ಮೆಟ್ ಧರಿಸದೆ ದ್ವಿಚಕ್ರವಾನಗಳ ಸಂಚಾರ, ತ್ರಿಬ್ಬಲ್ ರೈಡಿಂಗ್ ಹೀಗೆ ಸಂಚಾರಿ ನಿಯಮಗಳನ್ನ ವಾಹನ ಸವಾರರು ಪಾಲಿಸುತ್ತಿಲ್ಲ. ಪೊಲೀಸರು ಸಹ ಪಿಕ್ ಅಂಡ್ ಚೂಸ್ ರೀತಿ ನಡೆದುಕೊಳ್ಳುವುದು ಸಹ ಈ ಸಂಚಾರಿ ನಿಯಮ ಉಲ್ಲಂಘನೆಗೆ ಕಾರಣ ಎನ್ನಬಹುದು.
ದಂಡ ಹಾಕಿ ಕೆಲ ಮಾಧ್ಯಮಗಳಲ್ಲಿ ಫೊಟೊ ಬರುವ ಹಾಗೆ ನೋಡಿಕೊಳ್ಳುವುದೇ ಪೊಲೀಸರ ಸಾಧನೆಯಾಗಿದೆ. ಈ ಸುದ್ದಿ ಬರೆದವರಿಗೆ ಕರೆ ಮಾಡಿ ತಾಕೀತು ಮಾಡುವುದು ಬಿಟ್ಟರೆ ನಿಯಮಗಳ ಪಾಲನೆಯಾಗುತ್ತಿಲ್ಲ. ಜಾಗೃತಿ ಮೂಡಿಸ ಬೇಕಾದ ಪೊಲೀಸರು ದಂಡ ಹಾಕುವಲ್ಲಿ ನಿರತರಾಗಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರೆ ನೋ ಪಾರ್ಕಿಂಗ್ ಚಿಹ್ನೆಯನ್ನ ಅಳವಡಿಸಿದರೂ ಆಟೋಗಳನ್ನ ಸಾಲಾಗಿ ನಿಲ್ಲಿಸಲಾಗಿದೆ. ಅಲ್ಲೇಪ್ರಯಾಣಿಕರನ್ನ ಹತ್ತಿಸಿಕೊಳ್ಳಲಾಗುತ್ತದೆ. ಎದುರುಗಡೆ ಸಂಚಾರಿ ಪೊಲೀಸರು ಮೈಕ್ ಇಟ್ಟುಕೊಂಡು ಡ್ಯೂಟಿಯಲ್ಲಿದ್ದರೂ ಯಾವ ಕ್ರಮನೂ ಜರಿಗಿಸುತ್ತಿಲ್ಲ.
ಒಂದು ವರೆ ವರ್ಷದ ಹಿಂದೆ ಆಟೋಗಳಿಗೆ ಕನಿಷ್ಠ ದೂರದ ಬೆಲೆಯನ್ನ 40 ರೂ.ಗೆ ಏರಿಸಲಾಗಿದೆ. 40 ರೂ. ದರ ಮೀಟರ್ ಕಡ್ಡಾಯಗೊಳಿಸಲಾಗಿದೆ. ಆದರೆ ಯಾವ ಆಟೋಗಳು ಮೀಟರ್ ಹಾಕುತ್ತಿಲ್ಲ. ಈ ಬಗ್ಗೆ ಪೊಲೀಸರು ತಲೆಕೆಡೆಸಿಕೊಳ್ಳುತ್ತಿಲ್ಲ. ಹಬ್ಬ ಹರಿದಿನಗಳಲ್ಲಿ ಜನರನ್ನ ಸುಲಿಗೆ ಮಾಡಲಾಗುತ್ತಿದೆ ಎಂದು ಈ ಹಿಂದೆ ದೂರು ಬಂದಿತ್ತು. ಆದರೆ ದೂರಿಗೆ ಮೀಟರ್ ಕನಿಷ್ಠ ಬೆಲೆ ಏರಿಕೆ ಯಾದರೂ ಯಾವುದೇ ಕ್ರಮವಿಲ್ಲದಂತಾಗಿದೆ.
ಪಶ್ವಿಮ ಸಂಚಾರಿ ಪೊಲೀಸರ ವ್ಯಾಪ್ತಿಗೆ ಬರುವ ಬಸ್ ನಿಲ್ದಾಣದಲ್ಲಿ ಕೂಗಳೆತೆಯಷ್ಟು ಠಾಣೆಯಿದೆ. ಇಲ್ಲೇ ಪಾಲನೆಯಾಗುತ್ತಿಲ್ಲ. ಆದರೆ ಇಲ್ಲಿ ಇನ್ ಸ್ಪೆಕ್ಟರ್ ಗಳು ಕೆಲ ದಂಡ ಹಾಕುವುದನ್ನೇ ಸಾಧನೆ ಎಂಬಂತೆ ಮಾಧ್ಯಮಗಳಲ್ಲಿ ಹಾಕಿಸುತ್ತಿದ್ದಾರೆ. ಆದರೆ ಕಣ್ಣಳತೆ ದೂರದಲ್ಲಿ ಜನರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ-https://suddilive.in/archives/18453