ಸ್ಯಾಡಿಸ್ಟ್ ಕುಮಾರ್ ಬಂಗಾರಪ್ಪ ಎಂದಿದ್ದ ಶಿಕ್ಷಣ ಸಚಿವರ ಹೇಳಿಕೆಗೆ ಮಾಜಿ ಸಚಿವರ ಪ್ರತಿಕ್ರಿಯೆ ಏನು?

ಸುದ್ದಿಲೈವ್/ಶಿವಮೊಗ್ಗ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ದಲ್ಲಿ ಈಗಾಗಲೇ ಸಚಿವರು ರಾಜೀನಾಮೆ ನೀಡಿದ್ದಾರೆ. ಪ್ರಕರಣ ದ ತನಿಖೆ ಮುಂದುವರೆದಿದೆ. ಇಡಿ ಮತ್ತು ಎಸ್ ಐ ಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೇ ರೀತಿ ಎಲ್ಲಾ ನಿಗಮಗಳದು ವಹಿವಾಟು ತನಿಖೆಯಾಗಬೇಕು. ಸರ್ಕಾರ ತಕ್ಷಣಕ್ಕೆ ಮಾಹಿತಿ ತರಿಸಿಕೊಂಡು ಕಾನೂನು ರೀತಿ ವ್ಯವಹಾರ ಆಗಿದ್ದೀಯಾ ಪರಿಶೀಲನೆ ನಡೆಸಬೇಕು. ಆಡಳಿತ ವ್ಯವಸ್ಥೆ ಅದೋಗತಿಗೆ ಹೋಗಿರೋದು ಶೋಚನೀಯ ಎಂದರು.

ಕೆಲ ಅಧಿಕಾರಿ ಗಳ ಕೈವಾಡ ಇದೆ ಅನ್ನೋದು ಸಾಬೀತುವಾಗಿದೆ. ಬಡವರ ಹಣ ದುರ್ಬಳಕೆ ಆಗಿದೆ. ಸರ್ಕಾರ ತೀಕ್ಷ್ಣ ವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ನಿಮ್ಮ ಬುಡದಲ್ಲಿ ಉರಿಯುತ್ತಿರುವುದನ್ನ ಸರಿ ಪಡಿಸಕೊಳ್ಳಬೇಕು ಎಂದರು.

ಚುನಾವಣೆ ವೇಳೆ ಸ್ಯಾಡಿಸ್ಟ್ ಕುಮಾರ್ ಬಂಗಾರಪ್ಪ ಎಂಬ ಮಧುಬಂಗಾರಪ್ಪ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಚಿವರು ಚುನಾವಣೆಯ ವೇಳೆ ಆರೋಪ ಪ್ರತ್ಯಾರೋಪ ಸರ್ವೇಸಾಮಾನ್ಯ, ಚುನಾವಣೆ ಮುಗಿದಿದೆ. ಈಗ ಆರೋಪ ಮಾಡೋದು ಎಲ್ಲಾ ಮುಗಿದಿದೆ. ಸರ್ಕಾರದ ಕಾರ್ಯ ವೈಖರಿಯನ್ನ ಜನರಿಗೆ ತಿಳಿಸಬೇಕಿದೆ.

ಈಗಲೂ ರಸ್ತೆಗಳನ್ನ ನೋಡಿದ್ರೆ ಸರ್ಕಾರದ ಅಭಿವೃದ್ಧಿ ಗೊತ್ತಾಗುತ್ತದೆ. ಮಧುಬಂಗಾರಪ್ಪ ಅವರು ಮಾತಾನಾಡೋದು ಬಿಟ್ಟು ರಸ್ತೆಗಳನ್ನ ಅಭಿವೃದ್ಧಿ ಪಡಿಸಲಿ. ಸೊರಬ ಕ್ಷೇತ್ರದಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ ಅದನ್ನ ಸರಿಪಡಿಸಿಕೊಳ್ಳಲಿ. ಕನಿಷ್ಠ ಪಕ್ಷ ಕ್ಷೇತ್ರಗಳಿಗೆ ಭೇಟಿ ನೀಡಿ ಅಭಿವೃದ್ಧಿ ಪಡಿಸಲಿ ಎಂದು ಸಲಹೆ ನೀಡಿದರು.‌

ಇದನ್ನೂ ಓದಿ-https://suddilive.in/archives/19266

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close