ಇಂದು ನಾಲ್ಕು ಗೇಟು ತೆರೆದು ಭದ್ರ ಜಲಶಯದಿಂದ ನದಿಗೆ ನೀರು




ಸುದ್ದಿಲೈವ್/ಭದ್ರಾವತಿ


ಭದ್ರ ಜಲಾಶಯದಿಂದ ನದಿಗೆ ನೀರು ಬಿಡಲಾಗಿದೆ. ಭದ್ರಾ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ನದಿಗೆ ಒಳಹರಿವು ಹೆಚ್ಚಾಗಿದೆ.


ನಿನ್ನೆ ಕಾಡಾ ಸಭೆಯಲ್ಲಿ ಜಲಾಶಯದಿಂದ ಎರಡು ನಾಲೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ರಾತ್ರಿ ಭದ್ರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಪರಿಣಾಮ ಒಳಹರಿವು ಹೆಚ್ಚಾಗಿದೆ.



30 ಸಾವಿರ ಕ್ಯೂಸೆಕ್ ನೀರು ಒಳಹರಿವಿದ್ದು ನಿನ್ನೆ 181.3 ಅಡಿ ನೀರು ಸಂಗ್ರಹವಾಗಿತ್ತು. ಇಂದು 183.3 ಕ್ಯೂಸೆಕ್ ನೀರು ಸಂಗ್ರಹವಾಗಿದ್ದ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. 186ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಪರಿಣಾಮ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ.


ಜಲಾಶಯದ ನಾಲ್ಕು ಗೇಟನ್ನ ನಾಲ್ಕು ಇಂಚು ಮೇಲಕ್ಕೆ ಎತ್ತರಿಸಿ  ಜಲಾಶಯದಿಂದ ನದಿಗೆ ನೀರು ಹರಸಲಾಗಿದೆ, ತಗ್ಗು ಪ್ರದೇಶದ ಜನರು ಸುರಕ್ಷಿತ ಸ್ಥಳಕ್ಕೆ ಸಾಗುವಂತೆ ಕೋರಲಾಗಿದೆ.‌

ಇದನ್ನೂ ಓದಿ-https://www.suddilive.in/2024/07/blog-post_536.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close