ಸುದ್ದಿಲೈವ್/ಶಿವಮೊಗ್ಗ
ನಗರದ ಗೋಪಾಳಗೌಡ ಬಡಾವಣೆಯಲ್ಲಿರುವ ಭಂಟರ ಭವನದಲ್ಲಿ ಬಿಜೆಪಿಯ ಜಿಲ್ಲಾ ವಿಶೇಷ ಕಾರ್ಯಕಾರಣಿ ಸಭೆ ನಡೆದಿದೆ ಸಂಸದ ರಾಘವೇಂದ್ರ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ನಾವು ವಿರೋಧ ಪಕ್ಷಕ್ಕೆ ಬಂದು ಒಂದು ಕಾಲು ವರ್ಷ ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಆಡಳಿತ ನೀಡಲಿಲ್ಲ. ಗ್ಯಾರೆಂಟಿಯಲ್ಲಿ ಲೋಕಸಭೆ ಚುನಾವಣೆ ಎದುರಿಸಿದ ವಿಪಕ್ಷಗಳು ಮಕಾಡೆ ಮಲಗಿದ್ದವೆ. 139 ಕ್ಷೇತ್ರದಲ್ಲಿ ಮೊದಲೇ ಸ್ಥಾನದಲ್ಲಿ ಬಿಜೆಪಿ ಕೂರಿಸಿದೆ ಎಂದರು.
ಕಾಂಗ್ರೆಸ್ ನ್ನ ಇಳಿಸಿ ಬಿಜೆಪಿಯನ್ನ ಅಧಿಕಾರಕ್ಕೆ ಕೂರಿಸಬೇಕೆಂಬ ಜನರ ಆಸೆಯಂತೆ ಕಾರ್ಯರ್ತರು ನಡೆಯಬೇಕಿದೆ. ವಿಧಾನ ಸಭೆ, ಲೋಕಸಭೆ, ಸಹಕಾರಿ ಕ್ಷೇತ್ರದ ಚುನಾವಣೆ ಮುಗಿಸಿದ್ದೇವೆ. ಕಬ್ಬಿಣದ ತುಂಡನ್ನ ಇಟ್ಟು, ಚಿನ್ನ ಎಂದು ಬಿಂಬಿಸಿ ಕೋಟ್ಯಾಂತರ ರೂ. ಸಾಲ ಪಡೆಯಲಾಗಿದೆ.
ಐದು ವರ್ಷ ಚುನಾವಣೆಗಾಗಿ ಶಕ್ತಿ ಹಾಕಲಾಗುತ್ತಿದೆ. ಎಲ್ಲವನ್ನೂ ಗೆಲ್ತೀವಿ ಆದರೆ ಈ ಸಹಕಾರಿ ಕ್ಷೇತ್ರವನ್ನ ಗೆಲ್ಲಲಾಗಲಿಲ್ಲ. ಇದನ್ನೂ ಗೆಲ್ಲಿಸಬೇಕಿದೆ. ಮೊನ್ನೆ ನಡೆದ ಡಿಸಿಸಿ ಬ್ಯಾಂಕ್ ನ ಚುನಾವಣೆಯಲ್ಲಿ ವಂಚಿಸುವ ಕೆಲಸ ಮಾಡುವ ಕಾರ್ಯಕರ್ತರು ನಮಗೆ ಯಾಕಬೇಕು ಎಂದು ಪ್ರಶ್ನಿಸಿದ ಸಂಸದರು, ಆ.14 ರಂದು ನಡೆಯುವ ಶಿಮೂಲ್ ಚುನಾವಣೆಯನ್ನ ಸವಾಲಾಗಿ ಸ್ವೀಕರಿಸೋಣ 6 ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಯನ್ನ ಗೆಲ್ಲಿಸೋಣ ಎಂದು ಕರೆನೀಡಿದರು.
ಸಾಗರ ಶಿಕಾರಿಪುರ ಸೊರಬ ಹೊಸನಗರದಿಂದ ಮೂವರು ಆಯ್ಕೆಯಾಗುತ್ತಾರೆ. ಶಿಕಾರಿಪುರದಲ್ಲಿ ಇಬ್ಬರು ಗೆದ್ದರೂ ಒಬ್ಬನೇ ಆಯ್ಕೆಯಾಗುತ್ತಾರೆ. ಕಾರ್ಯದರ್ಶಿಯ ವಿಶ್ವಾಸ ಗಳಿಸಬೇಕಿದೆ. ಒಂದು ಲೀಟರ್ ಹಾಲಿಗೆ ಒಂದು ರೂ. ಪ್ರೋತ್ಸಾಹ ಧನ ನೀಡಲು ಆರಂಭಿಸಿದ್ದು ಬಿಜೆಪಿಯ ಯಡಿಯೂರಪ್ಪನವರ ಸರ್ಕಾರ. ಆದರೆ ಹಾಲಿನ ಪ್ರೋತ್ಸಹ ಧನ ಇಲ್ಲದಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ ಹಾಗಾಗಿ ಹಾಲಿಗೆ ವಿಷ ಬೆರೆಸಿದ ಕಾಂಗ್ರೆಸ್ ಬೇಕೋ ಹಾಲಿಗೆ ಸಹಕಾರ ಧನ ನೀಡಿದ ಬಿಜೆಪಿ ಬೇಕೋ ವಿಚಾರಿಸಿ ಎಂದರು.
ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡ್ತಾ ಇದೆ. ನಮ್ಮ ಶಾಸಕರಿಗೆ ಒಂದು ರೂ.ನ್ನೂ ಅನುಧಾನ ಹಣ ನೀಡ್ತಾ ಇಲ್ಲ. ನಮ್ಮ ಸರ್ಕಾರ ಇದ್ದಾಗ ಇತರೆ ಪಕ್ಷದ ಶಾಸಕರಿಗೂ ಸಹಾಯಧನ ನೀಡಲಾಗಿತ್ತು. ಆದರೆ ಯಾವ ಹಣ ಬರುತ್ತಿಲ್ಲ. ವರ್ಷಕ್ಕೆ ಕೇಂದ್ರ ಸರ್ಕಾರ ಐದು ಕೋಟಿ ಹಣ ಅಭಿವೃದ್ಧಿಗೆ ನೀಡುತ್ತದೆ. ಈ ಹಣವನ್ನ ಕಾರ್ಯಕರ್ತರು ಸೂಚಿಸಿದಂತೆ ವಿನಿಯೋಗ ಮಾಡುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಯಾವ ಕಾರಣಕ್ಕೂ ಐದು ವರ್ಷ ಪೂರೈಸೊಲ್ಲ. ಕಾಂಗ್ರೆಸ್ ನ ಸ್ಥಿತಿ ಹೇಗಿದೆ ಎಂದರೆ ಯಾವ ಸಮಯದಲ್ಲಿ ಬೀಳತ್ತೋ ಗೊತ್ತಿಲ್ಲ ಎಂದು ಅಚ್ಚರಿಯ ಹೇಳಿಕೆಯನ್ನ ಹೇಳಿದ ಸಂಸದರು, ಕಾಂಗ್ರೆಸ್ ಗೆ ಅಹಂಕಾರ ಬಂದಿದೆ. ಇತ್ತೀಚೆಗೆ ಟಿವಿ ನ್ಯೂಸ್ ನೋಡುವ ಸಮಯದಲ್ಲಿ ರೈತರು ಸಿಎಂಗೆ ನೀಡಿದ ಮನವಿಯನ್ನ ಅವರ ಸಹಾಯಕರು ಡಸ್ಟ್ ಬಿನ್ ಗೆ ಹಾಕಿರುವ ದೃಶ್ಯ ನೋಡಿ ಬೇಸರವಾಗಿದೆ ಎಂದರು.
ಟೂಟೈರ್ ಸಿಟಿಯಲ್ಲಿ ಶಿವಮೊಗ್ಗವನ್ನ ಅಗ್ರಗಣ್ಯನ್ನಾಗಿಸೋಣ. ನಾನು ಸಂಸತ್ ನಲ್ಲಿ ಮತದಾರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ ಆಕ್ಷೇಪಣೆ ಕೇಳಿ ಬಂದಿತ್ತು. ಆದರೆ ಮತದಾರರ ಹೆಸರಿನಲ್ಲಿ ಮತ ಸ್ವೀಕರಿಸುವ ಬಗ್ಗೆ ತಲೆಕೆಡೆಸಿಕೊಳ್ಳಲಿಲ್ಲ ಎಂದರು.
ಇದನ್ನೂ ಓದಿ-https://suddilive.in/archives/19234