ಸುದ್ದಿಲೈವ್/ಸಾಗರ
ಲೋಕಸಭಾ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರು ನಿನ್ನೆಯ ದಿನ ಸಂಸತ್ತಿನಲ್ಲಿ ಹಿಂದೂಗಳು ಹಿಂಸಾಚಾರ ಮತ್ತು ದ್ವೇಷವನ್ನು ಹರಡುತ್ತಾರೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಸಾಗರದಲ್ಲಿ ಬಿಜೆಪಿ ನಗರ ಮಂಡಲದ ವತಿಯಿಂದ ಭರ್ಜರಿ ಪ್ರತಿಭಟನೆ ನಡೆಸಿ ಎಸಿಗೆ ಮನವಿ ಸಲ್ಲಿಸಿತು.
ತತ್ತಕ್ಷಣದಲ್ಲಿ ರಾಹುಲ್ ಗಾಂಧಿಯವರನ್ನು ವಿಪಕ್ಷ ನಾಯಕರ ಸ್ಥಾನದಿಂದ ವಜಾಗೊಳಿಸಬೇಕಾಗಿ ಆಗ್ರಹಿಸಿ ಇಂದು ಬಿಜೆಪಿ ಸಾಗರ ನಗರ ಮಂಡಲದ ವತಿಯಿಂದ ಮಂಡಲ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಕೆಆರ್ ಅವರ ಅಧ್ಯಕ್ಷತೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆಯ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿಡಿ ಮೇಘರಾಜ್ , ಉತ್ತರ ಕನ್ನಡದ ಪ್ರಭಾರಿಯಾದ ಪ್ರಸನ್ನ ಕೆರೆ ಕೈ , ಜಿಲ್ಲಾ ಕಾರ್ಯದರ್ಶಿಯಾದ ಶ್ರೀಮತಿ ಮಧುರಾ ಶಿವಾನಂದ್, ಜಿಲ್ಲಾ ಯುವ ಮೋರ್ಚಾದ ಪ್ರಭಾರಿಯಾದ ಸಂತೋಷ ಆರ್ ಶೇಟ್ , ಜಿಲ್ಲಾ ಓಬಿಸಿ ಮೋರ್ಚಾದ ಸಹಪ್ರಭಾರಿಯಾದ ಆರ್ ಶ್ರೀನಿವಾಸ್ ಮೇಸ್ತ್ರಿ ,
ಹೊಸನಗರ ಮಂಡಲದ ಪ್ರಭಾರಿಯಾದ ಮಹೇಶ್ ವಿ, ಯುವ ಮೋರ್ಚಾದ ಅಧ್ಯಕ್ಷರಾದ ಪರಶುರಾಮ್, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಪ್ರೇಮಕಿರಣ್ ಸಿಂಗ್ , ಪ್ರಧಾನ ಕಾರ್ಯದರ್ಶಿಯಾದ ಸಂತೋಷ ರಾಯಲ್, ಮಂಡಲದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು ಪಕ್ಷದ ವಿವಿಧ ಸ್ಥರದ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/18322