ಮಂಗಳವಾರ, ಜುಲೈ 23, 2024

ವಿದ್ಯುತ್ ಇಲಾಖೆ ವೀರಶೈವ ಸಂಘದಿಂದ ಅಭಿಮಾನದದ ಸನ್ಮಾನ, ಎಸ್.ಇ. ಶಶಿಧರ್ ಅವರಿಗೆ ಸಾರ್ಥಕ ಷಷ್ಠಿ

ಮೆಸ್ಕಾಂ ಎಸ್ ಇ ಶಶಿಧರ್


ಸುದ್ದಿಲೈವ್/ಶಿವಮೊಗ್ಗ, ಜು.23


ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಬರುವ ಜುಲೈ 28 ರ ಭಾನುವಾರ ಸಂಜೆ 4 ಗಂಟೆಗೆ ಕುವೆಂಪುರಂಗಮಂದಿರದಲ್ಲಿ  ಅಭಿಮಾನದ ಸನ್ಮಾನ ಹಾಗೂ ಸಾರ್ಥಕ ಷಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 


ಆರಂಭದಲ್ಲಿ ಭದ್ರಾವತಿ ಚಿಂತನ ಕಲಾವೃಂದದ ಹಾಡೋನಹಳ್ಳಿ ಸ್ವಾಮಿ ಮತ್ತು ತಂಡದವರಿಂದ ಎಂದೂ ಮರೆಯದ ಹಾಡುಗಳು ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.


ಅಂದು ಸಂಜೆ 6:00ಗೆ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮತ್ತು ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ನಿಕಟಪೂರ್ವ ಶಾಸಕ ರುದ್ರೇಗೌಡ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಅವರಿಗೆ ಅಭಿಮಾನದ ಸನ್ಮಾನವನ್ನು ಆಯೋಜಿಸಲಾಗಿದೆ.


ಇದೇ ಸಂದರ್ಭದಲ್ಲಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗ ಮೆಸ್ಕಾಂ ವೃತ್ತದ  ಅಧೀಕ್ಷಕ ಅಭಿಯಂತರರಾದ ಎಸ್.ಜಿ.ಶಶಿಧರ್ ಅವರಿಗೆ ವಯೋನಿವೃತ್ತಿ ಪೂರ್ವ ಸನ್ಮಾನ "ಸಾರ್ಥಕ ಷಷ್ಠಿ" ಅನ್ನು ಹಮ್ಮಿಕೊಳ್ಳಲಾಗಿದೆ. 


1991 ರಿಂದ ಇಲ್ಲಿವರೆಗೆ ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಶಶಿಧರ್ ಅವರು ಶಿವಮೊಗ್ಗದ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರಾಗಿ, ಅಧೀಕ್ಷಕ ಅಭಿಯಂತರವಾಗಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿರುವುದನ್ನು ಗಮನಿಸಿ ಈ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ. ಅಂತೆಯೇ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ವೀರಶೈವ ವಿದ್ಯುತ್ ಇಲಾಖೆ ನೌಕರರ ಸಂಘ ಈಗಾಗಲೇ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿ ನೌಕರರ ಹಾಗೂ ಸಮಾಜದ ಸೇವಾವಾಣಿಯಾಗಿ ಕೆಲಸ ಮಾಡುತ್ತಿದೆ ಎಂಬುದು ಇಲ್ಲಿ ಸ್ಮರಣಾರ್ಹ.

ಇದನ್ನೂ ಓದಿ-https://www.suddilive.in/2024/07/blog-post_869.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ