ಸುದ್ದಿಲೈವ್/ಹೊಸನಗರ
ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲೂಕಿನಾದ್ಯಂತ ರಜೆ ಘೋಷಣೆಗೆ ತಾಲೂಕು ಆಡಳಿತ ಸಜ್ಜುಗೊಂಡಿದೆ.
ಹೊಸನಗರ ತಾಲೂಕಿನಾದ್ಯಂತ ಈ ಬಗ್ಗೆ ಸುದ್ದಿಲೈವ್ ಗೆ ಮಾಹಿತಿ ನೀಡಿದ ತಹಶೀಲ್ದಾರ್ ರಶ್ಮಿ ನಾಳೆ ಶಾಲೆ, ಕಾಲೇಜು ಹಾಗೂ ಅಂಗನವಾಡಿಗೆ ರಜೆ ಘೋಷಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಸಧ್ಯಕ್ಕೆ ಸಭೆ ನಡೆಯುತ್ತಿದ್ದು ಈ ಬಗ್ಗೆ ತೀರ್ಮಾನ ಹೊರಬೀಳಬೇಕಿದೆ.
ಹೊಸನಗರ ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ಅಧಿಕ ಮಳೆ ಬೀಳುತ್ತಿದ್ದು, ಶಾಲಾ ಮಕ್ಕಳಿಗೆ ಓಡಾಡಲು ಅನಾನಕೂಲವಾಗುತ್ತಿರುವುದ ರಿಂದ ರಜೆ ಘೋಷಣೆಯ ಬಗ್ಗೆ ಅಯಾ ತಹಶೀಲ್ದಾರ್ ಗೆ ಅಧಿಕಾರ ನೀಡಲಾಗಿದೆ.
ಈ ಬಗ್ಗೆ ಸಾಗರ ತಹಶೀಲ್ದಾರ್ ಸುದ್ದಿಲೈವ್ ಗೆ ಮಾತನಾಡಿ ತಾಲೂಕಿನಾದ್ಯಂತ ಮಳೆ ಜೋರಾಗಿದೆ. ಈ ಬಗ್ಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು. ಆದರೆ ಮೂಲಗಳ ಪ್ರಕಾರ ನಾಳೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸುವ ನಿರೀಕ್ಷೆ ಇದೆ. ಕಾಲೇಜುಗಳುಗೆ ರಜೆ ಘೋಷಣೆ ಬಗ್ಗೆ ತೀರ್ಮಾನವಾಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ-https://suddilive.in/archives/19349