ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟ

ಸುದ್ದಿಲೈವ್/ಶಿವಮೊಗ್ಗ

ಕಳೆದ 24 ಗಂಟೆಗಳಲ್ಲಿ ಮಲೆನಾಡಿನಲ್ಲಿ ಉತ್ತಮ ಮಳೆಯಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದ್ದು ಜಲಾಶಯಗಳ ನೀರು ಸಂಗ್ರಹ ಕೆಳಗಿನಂತಿದೆ.

72 ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ತುಂಗೆಯಲ್ಲಿ 2 ಸಾವಿರ ಕ್ಯೂಸೆಕ್ ನೀರು ಕಡಿಮೆ ಹರಿಯುತ್ತಿದೆ. ಗಾಜನೂರು ತುಂಗ ಜಲಾಶಯದಲ್ಲಿ 10 ಗೇಟನ್ನ 2.5 ಅಡಿ ಎತ್ತರ, 10 ಗೇಟಿನಲ್ಲಿ 2 ಅಡಿ ಎತ್ತರ ಹಾಗೂ ಒಂದು ಗೇಟನ್ನ ಒಂದು ಅಡಿ ಎತ್ತರ ಏರಿಸಿ ಅಷ್ಟೇ ಪ್ರಮಾಣದಲ್ಲಿ ನೀರನ್ನ ಹರಿಸಲಾಗುತ್ತಿದೆ.

ಭದ್ರ ಜಲಾಶಯದಲ್ಲೂ ಒಳ ಹರಿವು 34 ಸಾವಿರಕ್ಯೂಸೆಕ್ ಗೆ ಏರಿಕೆಯಾಗಿದೆ. ನಿನ್ನೆ 27 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿತ್ತು. 7 ಸಾವಿರ ಕ್ಯೂಸೆಕ್ ನೀರು ಒಳಹರಿವು ಹೆಚ್ಚಾಗಿದೆ.

ಇದರಿಂದ ನಿನ್ನೆ 144.7 ಅಡಿ ಸಂಗ್ರಹವಾಗಿದ್ದ ಭದ್ರ ನದಿಯ ಜಲಾಶಯದ ನೀರಿನ ಮಟ್ಟ 148.6 ಅಡಿಗೆ ಏರಿಕೆಯಾಗಿದೆ. ಇದರಿಂದ 2.9 ಅಡಿ ನೀರು ಕಳೆದ 24 ಗಂಟೆಯಲ್ಲಿ ಹೆಚ್ಚಳವಾಗಿದೆ.

1819 ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಲ್ಲಿ 1784.70 ಅಡಿ ನೀರು ಸಂಗ್ರಹವಾಗಿದೆ. ಸಧ್ಯಕ್ಕೆ  52366 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 113.0 ಮಿಮಿ ಮಳೆಯಾಗಿದ್ದು, ಕಳೆದ 24 ಗಂಟೆಯಲ್ಲಿ ನಿನ್ನೆಗಿಂತ ನೀರಿನ ಒಳಹರಿವು ಕಡಿಮೆಯಾಗಿದೆ. ಕಳೆದ ವರ್ಷ 1756.40 ಅಡಿ ಸಂಗ್ರಹವಾಗಿತ್ತು.

ಇದನ್ನೂ ಓದಿ-https://suddilive.in/archives/19506

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket