ಕೊಲೆ ಆರೋಪಿಗೆ ಶಿಕ್ಷೆ

ಸುದ್ದಿಲೈವ್/ಶಿವಮೊಗ್ಗ

 2020 ನೇ ಇಸವಿಯಲ್ಲಿ ನಡೆದ ಕೊಲೆ‌ ಪ್ರಕರಣವೊಂದರಲ್ಲಿ‌ ಮೂವರು ಆರೋಪಿಗಳಿಗೆ ಜೀವಾವದಿ ಶಿಕ್ಷೆ ಹಾಗೂ ತಲಾ 20 ಸಾವಿರ ರೂ ದಂಡ ವಿಧಿಸಿ ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ದಿನಾಂಕಃ 27-07-2020 ರಂದು ರಾತ್ರಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳಲೂರು ಗ್ರಾಮದ ವಾಸಿಗಳಾದ ರಿಯಾಸ್, ಮುನಿರಾಜು ಮತ್ತು ಅರುಣ ರವರುಗಳು ಅದೇ ಗ್ರಾಮದ ವಾಸಿ ಮಲ್ಲೇಶಪ್ಪ, 39 ವರ್ಷ ಇವರ ಮೇಲಿದ್ದ ವೈಯಕ್ತಿಕ ದ್ವೇಶದ ಹಿನ್ನೆಲೆಯಲ್ಲಿ ಮಲ್ಲೇಶಪ್ಪನವರ ಜಮೀನಿನ ಹತ್ತಿರ ಹರಿತವಾದ ಆಯುಧದಿಂದ ಆತನ ಮೈ ಕೈ ಗೆ ಚುಚ್ಚಿ, ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ.

ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಕಲಂ 302 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀ ಸಂಜೀವ್ ಕುಮಾರ್ ಟಿ, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿನ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಮಮತಾ, ಬಿ. ಎಸ್ ಸರ್ಕಾರಿ ಅಭಿಯೋಜಕರವರು, ವಾದ ಮಂಡಿಸಿದ್ದು, ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡ ಪಟ್ಟಿ ಸಲ್ಲಿಸಿದ್ದರು.‌

ದೋಷಾರೋಪಣ ಪಟ್ಟಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ  ಮರುಳ ಸಿದ್ಧಾರಾಧ್ಯ ಹೆಚ್. ಜೆ. ರವರು ಇಂದು ಪ್ರಕರಣದ ಆರೋಪಿತರಾದ 1) ರಿಯಾಸ್, 22 ವರ್ಷ, ಹೊಳಲೂರು ಗ್ರಾಮ ಶಿವಮೊಗ್ಗ, 2) ಮುನಿರಾಜು, 33 ವರ್ಷ, ಹೊಳಲೂರು ಗ್ರಾಮ ಶಿವಮೊಗ್ಗ, ಮತ್ತು 3) ಅರುಣ, 20 ವರ್ಷ, ಹೊಳಲೂರು ಗ್ರಾಮ ಶಿವಮೊಗ್ಗ, ಇವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 20,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

ಇದನ್ನೂ ಓದಿ-https://suddilivesmg.blogspot.com/2024/07/blog-post.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close