Girl in a jacket

ಭದ್ರ ಜಲಾಶಯದಿಂದಲೂ ಹೊರಬಿತ್ತು ಮೊದಲ ನೋಟೀಸ್

 

ಭದ್ರ ಜಲಾಶಯ


ಸುದ್ದಿಲೈವ್/ಭದ್ರಾವತಿ


ಮಳೆ ಆರ್ಭಟದಿಂದಾಗಿ ಹಳ್ಳಕೊಳ್ಳಗಳು ನದಿ, ಜಲಾಶಯಗಳು ಭರ್ತಿಯಾಗುತ್ತಿವೆ. ಈಗಾಲೇ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತ ಬಂದ ಇರುವ ಹಿನ್ನಲೆಯಲ್ಲಿ ಮೊದಲ‌ ಎಚ್ಚರಿಕೆಯ ನೋಟೀಸ್ ಜಾರಿ ಮಾಡಲಾಗಿದೆ.


ಭದ್ರ ಜಲಾಶಯದಿಂದಲೂ ಮುನ್ನಚ್ಚರಿಕೆಯ ನೋಟೀಸ್ ಹೊರಬಿದ್ದ ನದಿ ಈಗಾಗಲೇ 174.3 ಅಡಿ ಭರ್ತಿಯಾಗಿದೆ. 35-40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದೇ ಒಳಹರಿವು ಮುಂದುವರೆದರೆ 186 ಅಡಿ ಸಾಮರ್ಥ್ಯದ ಜಲಾಶಯ ಶೀಘ್ರದಲ್ಲಿಯೇ ಭರ್ತಿಯಾಗಲಿದೆ. 


ಈ ಹಿನ್ನಲೆಯಲ್ಲಿ ಜಲಾಶಯದಿಂದ ಮೊದಲ ಸಾರ್ವಜನಿಕ ಎಚ್ಚರಿಕೆಯನಗನ ಜಾರಿಗೊಳಿಸಲಾಗಿದೆ. ಆಣೆಕಟ್ಟು ಸುರಕ್ಷತೆಯಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ಒಳ ಹರಿವಿನ ಪ್ರಮಾಣಕ್ಕೆ ಅನುಗುಣವಾಗಿ Spill Way Gate ಮುಖಾಂತರ ನದಿಗೆ ಬಿಡಲಾಗುವುದು. ಆದುದರಿಂದ ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ ಕೋರಲಾಗಿದೆ.‌


ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.


ಇದನ್ನೂ ಓದಿ-https://www.suddilive.in/2024/07/blog-post_751.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು