ಘಂಟೆ ಕಳ್ಳರ ಬಂಧನ

ಮಾಲು ಸಮೇತ ಘಂಟೆ ಕಳ್ಳರ ಬಂಧನ


ಸುದ್ದಿಲೈವ್/ಶಿವಮೊಗ್ಗ

ಮಾಳೂರು ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿನ ಚಿಡುವ ಆಂಜನೇಯ ದೇವಸ್ಥಾನ ಗಾಳಿಮಾರಮ್ಮ ದೇವಸ್ಥಾನ ಹಾಗೂ ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ ಬಾಳಾಗಾರು ರಾಮೇಶ್ವರ ದೇವಸ್ಥಾನಗಳಲ್ಲಿ ಘಂಟೆ, ಪೂಜಾಸಾಮಾಗ್ರಿಗಳು ಹಾಗೂ ಬೆಳ್ಳಿಯ ದೀಪಗಳನ್ನು  ಕಳ್ಳತನ ಪ್ರಕರಣ ನಡೆದಿತ್ತು.  

ಮಾಳೂರು ಠಾಣೆಯಲ್ಲಿ ಹಾಗೂ ತೀರ್ಥಹಳ್ಳಿ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು. ಪ್ರಕರಣವನ್ನು ಬೆನ್ನುಹತ್ತಿದ ಮಾಳೂರು ಪೊಲೀಸರ ತಂಡ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರಿಂದ ಅಂದಾಜು  ಮೌಲ್ಯ 70,000 ರೂಪಾಯಿಗಳ ವಸ್ತುಗಳು  ಹಾಗೂ ಕೃತ್ಯಕ್ಕೆ ಬಳಸಿದ ಓಮ್ನಿ  ವಾಹನ ಅಂದಾಜು ಮೌಲ್ಯ 200000 ರೂಪಾಯಿಗಳ ನ್ನು ವಶಪಡಿಸಿಕೊಂಡಿರುತ್ತಾರೆ. 

ಕಾರ್ಯಾಚರಣೆಯಲ್ಲಿ  ಗಜಾನನ ವಾಮನ ಸುತಾರ. ಡಿವೈಎಸ್ಪಿ ಹಾಗೂ  ಶ್ರೀಧರ ಸಿಪಿಐ ಮಾಳೂರು ರವರ ಮಾರ್ಗದರ್ಶನದಲ್ಲಿ   ಕುಮಾರ್ ಕುರಗೊಂದ ಪಿಎಸ್ಐ ಶ್ರೀ ಶಿವಾನಂದ ಧರೇನವರ್ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಹೆಚ್ ಸಿ ಸುರಕ್ಷಿತ,ಪಿಸಿ ಸಂತೋಷ್ ಹೆಚ್ ಸಿ  ರಾಜಶೇಖರ್, ಮಂಜುನಾಥ್ ಕೋಣಂದೂರುಪಿಸಿ ಪ್ರದೀಪ್,ವಿವೇಕ್, ಪ್ರಸನ್ನ,ಚೇತನ್,ಮಂಜುನಾಥ್, ಹಾಗೂ ಜಿಪ್ ಚಾಲಕ ಅಭಿಲಾಷ್ ರವರು ಕಾರ್ಯಾಚರಣೆ ನಡೆಸಿ 2 ಜನ ಆರೋಪಿತರನ್ನು ಭಂದಿಸುವಲ್ಲಿ  ಯಶಸ್ವಿಯಾಗಿರುತ್ತಾರೆ.

ಆರೋಪಿತರ ವಿವರ 

1 ).ಅರುಣ ತಂದೆ ಗೋಪಾಲ 26 ವರ್ಷ ಕೋಲಿಬ್ಲಾಕ್ ಶೆಡ್ ಭದ್ರಾವತಿ

2 ).ಆಕಾಶ್ ತಂದೆ ಬಾಬು 24 ವರ್ಷ ಬುಳ್ಳಾಪುರ ಭದ್ರಾವತಿ ರವರುಗಳಾಗಿದ್ದು ಇವರನ್ನ ಬಂಧಿಸಲಾಗಿದೆ.‌

ಇದನ್ನೂ ಓದಿ-https://www.suddilive.in/2024/07/28-29.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close