ಕಾಳಜಿ ಕೇಂದ್ರ, ಮತ್ತು ಮನೆಹಾನಿಗೊಳಗಾದ ಜಾಗಕ್ಕೆ ಶಾಸಕ ಚೆನ್ನಬಸಪ್ಪ ಭೇಟಿ

 ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಮಳೆಯಿಂದಾಗಿ ಉರುಳಿಬಿದ್ದಿರುವ ಮನೆಗಳ ವೀಕ್ಷಣೆಗೆ ಶಾಸಕ ಚೆನ್ನಬಸಪ್ಪನವರು ಇಂದು ಭೇಟಿ ನೀಡಿ ಅವಲೋಕಿಸಿದರು. ಪುರಲೆ ಮತ್ತು ಮಿಳಘಟ್ಟದಲ್ಲಿ ಮಳೆಗೆ ಹಾನಿಗೊಳಗಾದ ಮನೆಗಳಿಗೆ  ಶಾಸಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.







ಕಳೆದ ವಾರದಿಂದ ಮಳೆ ಹೆಚ್ಚಾಗಿದ್ದು ಮಳೆಗೆ ಮನೆಗಳು ಉರುಳಿ ಬೀಳುತ್ತಿವೆ. ಇಂದು ಸಹ ತಾಲೂಕಿನಲ್ಲಿ 23 ಮನೆಗಳು ಹಾನಿಗೊಳಗಾಗಿದೆ. ಮಣ್ಣಿನ ಗೋಡೆಯ ಮನೆಗಳು ಮಳೆಗೆ ಭದ್ರತೆಯಿಲ್ಲದೆ ಬೀಳಲಾರಂಭಿಸುತ್ತಿವೆ. ಇಂತಹ ಮನೆಗಳನ್ನ ಗುರುತಿಸಿ ಆಶ್ರಯ ಮನೆಗಳನ್ನ ನೀಡಬೇಕಿದೆ. ಆದರೆ ಇಂತಹವರನ್ನ ಗುರುತಿಸಬೇಕಿದ್ದ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿರ್ಲಕ್ಷತನದಿಂದಾಗಿ ಇಂತಹ ದುಸ್ಥಿತಿ ನಿರ್ಮಾಣವಾಗಿದೆ.  


ಪ್ರತಿ ವರ್ಷ ಸೂರಿನ ಬಗ್ಗೆ ಮಾತನಾಡುವ ಸರ್ಕಾರ, ಮನೆಗಳಿಗಾಗಿ ವಸತಿಯೋಜನೆಯನ್ನೇನೋ ಜಾರಿಗೆ ತಂದಿದೆ. ಆದರೆ ಇಂತಹ ನಿಜವಾದ ಸಂತ್ರಸ್ತರನ್ನ ಗುರುತಿಸಿ ಹಂಚಬೇಕಿದೆ. ಎನಿವೇ...! ಕಳೆದ ಒಂದು ವಾರದಿಂದು ಸಯರಿದಿರುವ ಮಳೆ ಬಡವರಿಗಂತೂ ಸಂಕಷ್ಟ ತಂದೊಡ್ಡಿದೆ. ಮಳೆಗೆ ಬಿದ್ದು ಹೋಗಿರುವ ಮನೆಗಳಿಗೆ ಇಂದು ಶಾಸಕ ಚೆನ್ನಬಸಪ್ಪ ಭೇಟಿ ನೀಡಿದ್ದಾರೆ.  ಮಿಳಘಟ್ಟದಲ್ಲಿ ಹಾನಿಗೊಳಗಾದ 2 ಮನೆಗಳಿಗೆ ಮತ್ತು ಪುರಲೆಯಲ್ಲಿ 4 ಮನೆಗಳಿಗೆ ಭೇಟಿ ನೀಡಿದ್ದಾರೆ. ಸಂತ್ರಸ್ತರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.


ಎರಡೂ ಬಡಾವಣೆಗಳಲ್ಲಿ ಸಂತ್ರಸ್ತರಾದ ಚೌಡೇಶ್ ತಂದೆ ರಂಗಪ್ಪ, ರೂಪ ಚಂದ್ರಪ್ಪ, ಸತೀಶ್ ಹಾಲಪ್ಪ, ಅನಿಲ, ರಂಗಪ್ಪ, ನಾಗರಾಜ ಸಣ್ಣಗುತ್ತಪ್ಪ, ಸಿದ್ದಪ್ಪ ಉಚ್ಚಪ್ಪ ಎಂಬುವರು ಮನೆಕಳೆದುಕೊಂಡಿದ್ದಾರೆ. ಇದರಲ್ಲಿ ಕೆಲವರ ಮನೆ ಗೋಡೆ ಬಿದ್ದರೆ, ಕೆಲವರು ಮನೆಯನ್ನೇ ಕಳೆದುಕೊಂಡಿದ್ದಾರೆ. ಇವರುಗಳ ಮನೆಗೆ ಶಾಸಕರು ಭೇಟಿ ನೀಡಿದರು. ಮಿಳಘಟ್ಟದಲ್ಲಿ ಮನೆಕಳೆದುಕೊಂಡ ಮಲ್ಲಮ್ಮ ಮತ್ತು ಶಾಲೆ ಗೋಡೆ ಬಿದ್ದು ಹಾನಿಗೊಳಗಾದ ಕಾರುಗಳು ಜಾಗಕ್ಕೆ ಭೇಟಿ ನೀಡಿದರು.


ಪುರಲೆಯಲ್ಲಿರುವ ಕಾಳಜಿ ಕೇಂದ್ರಕ್ಕೂ ಭೇಟಿ

ಗುರುಪುರದ ಎಕೆ ಕಾಲೋನಿಯಲ್ಲಿ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಪುರಲೆಯ ಸರ್ಕಾರಿ ಶಾಲೆಗಳಲ್ಲಿ 11 ಜನ ನಿರಾಶ್ರಿತರಿಗೆ ಕಾಳಜಿ ಕೇಂದ್ರ ಆರಂಭವಾಗಿದೆ. ಇವರನ್ನೂ ಭೇಟಿ ಮಾಡಿದ ಶಾಸಕರು ಧೈರ್ಯ ತುಂಬಿದ್ದಾರೆ. ಈ ವೇಳೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ, ಜ್ಞಾನೇಶ್ವರ್, ಪ್ರಭು ಶಾಸಕರಿಗೆ ಸಾಥ್ ನೀಡಿದ್ದರು. 

ಇದನ್ನೂ ಓದಿ-https://www.suddilive.in/2024/07/blog-post_278.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close