ಹಿಟ್ಟೂರು ಬಳಿ ರಸ್ತೆ ಅಪಘಾತ-ಬೈಕ್ ಸವಾರ ಸಾವು

ಸುದ್ದಿಲೈವ್/ಶಿವಮೊಗ್ಗ

ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿಟ್ಟೂರಿನ ಬಳಿ ಓಮಿನಿ‌ ಮತ್ತು ಬೈಕ್ ನಡುವೆ ಡಿಕ್ಕಿ ಉಂಟಾಗಿದ್ದು, ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು ಕಂಡಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ‌ ಕೊಡತಾಳು ಗ್ರಾಮದ ಜಗದೀಶ್ ಅಪಘಾತದಲ್ಲಿ ಸಾವುಕಂಡಿದ್ದಾರೆ. ಇವರಿಗೆ 30ವರ್ಷ ವಯಸ್ಸಾಗಿತ್ತು.

ಹಾರನಹಳ್ಳಿಯ ಬ್ಯಾಂಕ್ ಗೆ ಹೋಗಿ ಬರುವುದಾಗಿ‌ ಕೆಎ‌ 17 ಹೆಚ್ ಇ 8581 ಬೈಕ್ ನಲ್ಲಿ ಹೊರಟಿದ್ದ ಜಗದೀಶ್, ಸವಳಂಗ ರಸ್ತೆಯಿಂದ ಹಾರನಹಳ್ಳಿ ಗ್ರಾಮದ ಕಡೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಕೆಎ 19 ಎಂ ಎಫ್ 2851 ನಂಬರಿನ ಓಮಿನಿ ವಾಹನ ಡಿಕ್ಕಿ ಹೊಡೆದಿದೆ.

ನೀಲಿ ಬಣ್ಣದ ಓಮಿನಿ ಕಾರು ಸಂಪೂರ್ಣ ಜಖಂಗೊಂಡಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/18247

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close