ಸುದ್ದಿಲೈವ್/ಶಿವಮೊಗ್ಗ
ಮನುಷ್ಯನಾದವನು ಹಗೆಂಗೋ ಬದುಕುವುದಲ್ಲ ಮಣ್ಣಿನ ಚೌಕಟ್ಟಿನಲ್ಲಿ ಬದುಕಬೇಕು ಎಂದು ನಟ ದೊಡ್ಡಣ್ಣ ಅಭಿಪ್ರಾಯಪಟ್ಟಿದ್ದಾರೆ.
ಎನ್ ಇಎಸ್ ನ ಹೆಚ್ ಎಸ್ ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಎನ್ ಎಸ್ಎಸ್ ಘಟಕ, ರೋವರ್ಸ್-ರೇಂಜರ್ಸ್ ರೆಡ್ ಕ್ರಾಸ್, ಭಾರತ ಸೇವಾದಳ, ಕ್ಲಬ್ ಗಳ ಉದ್ಘಾಟನ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.
ಹೆತ್ತವರನ್ನ ನೋಯಿಸಬೇಡಿ ಪ್ರತ್ಯಕ್ಷ ದೇವರೆಂದರೆ ತಾಯಿ ಒಬ್ಬಳೆ, ತಾಯಿಯೇ ಮೊದಲ ಗುರು ಆಗುತ್ತಾಳೆ. ಸಮಾಜದಲ್ಲಿ ತಾಯಿ ನಂತರ ಬರುವನು ತಂದೆ, ತಂದೆಯ ನಂತರ ಬರುವನು ಗುರು. ಆದರೆ ಇಂದಿನ ದಿನಗಳಲ್ಲಿ ಮಕ್ಕಳನ್ನ ದಂಡಿಸುವ ಗುರುವಿನ ಮೇಲೆ ದಂಡೆತ್ತಿ ಹೋಗುವ ಪ್ರಕ್ರಿಯೆ ಶುರುವಾಗಿದೆ. ಇದು ಸರಿಯಾದ ರೀತಿಯಲ್ಲ ಎಂದರು.
10 ತಾಯಿಯ ಪ್ರೀತಿಯನ್ನ ಒಬ್ಬ ಗುರು ಕೊಡುತ್ತಾನೆ. ತಂದೆ ತಾಯಿ, ಪೋರ್ವಿಕರನ್ನ ಪೂಜ್ಯ ಮನೋಭಾವನೆಯಿಂದ ನೋಡಬೇಕು ಎಂದ ನಟ ಮೂರು ಸರ್ವಶ್ರೇಷ್ಠ ಬಾಷೆಗಳಲ್ಲಿಕನ್ನಡ ರಾರಾಜಿಸುತ್ತದೆ, ಮಾತನಾಡಿದಂತೆ ಬರೆಯಲು ಬಲ್ಲದ್ದು ಕನ್ನಡವೊಂದೆ. ಕನ್ನಡವನ್ನ ಲಿಪಿಗಳ ರಾಣಿ ಎನ್ನುತ್ತಾರೆ. ಆದರೆ ಕನ್ನಡವನ್ನ ಬೆಳೆಸಿದಿವರು ಥಾಮಸ್ ಮೆನ್ರೋ, ಕಿಟ್ಟನ್ ಮೊದಲಾದವರೇ ಎಂದರು.
ತಂಜಾವೂರ ಶಾಸನದಲ್ಲಿ ಕನ್ನಡ ಶಾಸನವಿದೆ. ಕವಿರಾಜ ಮಾರ್ಗದಲ್ಲಿ ಕನ್ನಡ ಹೇಗೆ? ಮತ್ತು ಕನ್ಬಡಿಗರು ಎಂಬುದನ್ನ ಬರೆದಿದ್ದಾರೆ ವಿವರಿಸಿದರು. ವೇದಿಕೆ ಸಿಕ್ಕರೆ ಕನ್ನಡ ನಿರ್ಗಳವಾಗಿ ಮಾತನಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದನ್ನೂ ಓದಿ-https://www.suddilive.in/2024/07/blog-post_707.html