ಶವಸಂಸ್ಕಾರಕ್ಕೆ ಅಡ್ಡಿ-ಶವವಿಟ್ಟು ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಕಾರಣ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ.
ವಿವಾದಿತ ಸ್ಥಳದಲ್ಲಿ ಸವಸಂಸ್ಕಾರ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭದ್ರಾವತಿ ತಾಲೂಕಿನ ಕನಸಿನ ಕಟ್ಟೆ ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿದೆ.
ನಿನ್ನೆ ಸಂಜೆ ಕನಸಿನಕಟ್ಟೆ ಗ್ರಾಮದಲ್ಲಿ
ವಿವಾದಿತ ಜಾಗದಲ್ಲಿ ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದರು.

ಜಾಗದ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಶವಸಂಸ್ಕಾರ ಮಾಡದಂತೆ ತಹಶೀಲ್ದಾರ್ ಮನವಿ ಮಾಡಿಕೊಂಡಿದ್ದರು.
ತಹಶೀಲ್ದಾರ್ ವಿರುದ್ಧ ತಿರುಗಿಬಿದ್ದ ಕನಸಿನ ಕಟ್ಟೆ ಗ್ರಾಮಸ್ಥರು ಶವವಿಟ್ಟು ಪ್ರತಿಭಟಿಸಿದ್ದಾರೆ.

ಹಿಂದಿನಿಂದಲೂ ಈ ಜಾಗದಲ್ಲಿ ಶವ ಸಂಸ್ಕಾರ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಅಲ್ಲೇ ಮಾಡುವುದಾಗಿ ಗ್ರಾಮಸ್ಥರು ಪಟ್ಟುಹಿಡಿದಿದ್ದರು.

ಆದರೆ ಈ ಜಾಗದಲ್ಲಿ ತೋಟವಿದೆವೆಂದು ನಕಲಿ ದಾಖಲೆ ಸೃಷ್ಟಿಸಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿ ಶವ ಹೂಳಲು ತೆಗೆದಿದ್ದ ಗುಂಡಿಯಲ್ಲಿ ಇಳಿದು, ಜಾಗ ತನ್ನದೆಂದು ಮಾಲಿಕನೋರ್ವ ಹೇಳಿಕೊಂಡಿದ್ದಾನೆ.

ಗುಂಡಿಯಿಂದ ಹೊರಬರುವಂತೆ ವ್ಯಕ್ತಿಗೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಮಾಲೀಕ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಘಟನೆ ನಿನ್ನೆ ನಡೆದಿದೆ.

ಇದನ್ನೂ ಓದಿ-https://suddilive.in/archives/19053

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close