ಬೃಹತ್ ಜನಾಗ್ರಹ ಜಾಥ

 ಸುದ್ದಿಲೈವ್/ಶಿವಮೊಗ್ಗ


ಗೋವಿಂದಾಪುರ ಆಶ್ರಯ ಯೋಜನೆಮನೆಗಳನ್ನ ಹಂಚುವಿಕರಯಲ್ಲಿ ವಿಳಂಬ, ಮೂಲಸೌಕರ್ಯಕ್ಕೆ ಒತ್ತಾಯ ಹಾಗೂ ಪಾಲಿಕೆಯಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಇಂದು ರಾಷ್ಟ್ರಭಕ್ತರ ಬಳಗ ಭರ್ಜರಿ ಪ್ರತಿಭಟನೆ ಆರಂಭಿಸಿದೆ.


ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ ಕಾಂತೇಶ್, ಮಾಜಿ ಕಾರ್ಪರೇಟರ್ ಇ.ವಿಶ್ವಾಸ್ ಮೊದಲಾದ ರಾಷ್ಡ್ರಭಕ್ತರ ಬಳಗ ಜನಾಗ್ರಹ ಜಾಥದಲ್ಲಿ ಪಾಲ್ಗೊಂಡಿದ್ದರು. ಕಳೆದ 9 ವರ್ಷದಿಂದ ಮನೆ ಹಂಚಿಕೆಯಾಗಿಲ್ಲ. 3000 ಮನೆಗಳಲ್ಲಿ 288 ಮನೆಗಳ ಕೀಲಿಯನ್ನ ಮಾತ್ರ ನೀಡಲಾಗಿದೆ. 


ಆದರೆ 2712 ಮನೆಗಳಿಗೆ ಸಾರ್ವಜನಿಕರು ಹಣ ನೀಡಿದರೂ ನಿರ್ಮಾಣವೇ ಪೂರ್ಣಗೊಂಡಿಲ್ಲ.‌ಹಾಗಾಗಿ ಆದಷ್ಟು ಬೇಗ ಸರ್ಕಾರ ಮನೆ ಹಂಚಬೇಕೆಂದು ಆಗ್ರಹಿಸಲಾಗಿದೆ. ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತವಿದೆ. ಆದಷ್ಟು ಬೇಗ ಪಾಲಿಕೆಗೆ ಚುನಾವಣೆ ನಡೆಸಿ ಪ್ರತಿನಿಧಿಗಳ ಆಡಳಿತಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ. 

ಇದನ್ನೂ ಓದಿ-http://www.suddilive.in/2024/07/blog-post_172.html

ಮಾಜಿ ಡಿಸಿಎಂ ಈಶ್ವರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಜಾಥಾ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಗಾಂಧಿ ಬಜಾರ್, ಶಿವಪ್ಪ ನಾಯಕ ಪ್ರತಿಮೆ,ಎಎ ವೃತ್ತ, ನೆಹರೂ ರಸ್ತೆಯ ಮೂಲಕ ಗೋಪಿ ವೃತ್ತಕ್ಕೆ ತಲುಪಲಿದೆ. ನಂತರ ಡಿಸಿಗೆ ಮನವಿ ಸಲ್ಲಿಸಲಾಗುವುದು.‌


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close