ಸುದ್ದಿಲೈವ್/ತೀರ್ಥಹಳ್ಳಿ
ರೆಡ್ ಅಲರ್ಟ್, ಅಧಿಕ ಮಳೆ ಹಿನ್ನಲೆಯಲ್ಲಿ ನಾಳೆಯೂ ಸಹ ಮೂರು ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಈಗ ಈ ಪಟ್ಟಿಯಲ್ಲಿ ಮತ್ತೊಂದು ತಾಲೂಕು ಸೇರ್ಪಡೆಯಾಗಿದೆ.
ಕಳೆದ ಮಂಗಳವಾರದಿಂದ ಜಿಲ್ಲೆಯಲ್ಲಿ ಮಳೆ ಹಿನ್ನಲೆಯಲ್ಲಿ ರಜೆ ಘೋಷಿಸುತ್ತಾ ಬರಲಾಗಿದೆ. ನಾಳೆ ತಾಲೂಕುಗಳಿಗೆ ಪರಿಸ್ಥಿತಿ ಅವಲೋಕಿಸಿ ರಜೆ ಘೋಷಿಸಲು ತಹಶೀಲ್ದಾರ್ ಗೆ ಅಧಿಕಾರ ನೀಡಲಾಗಿದೆ. ಈ ಬೆನ್ನಲ್ಲೇ ಹೊಸನಗರ, ಸೊರಬ, ಸಾಗರ ತಾಲೂಕಿನಲ್ಲಿ ಆಯಾ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ.
ಈಗ ರಜೆಯ ಪಟ್ಟಿಯಲ್ಲಿ ಮತ್ತೊಂದು ತಾಲೂಕು ಸೇರ್ಪಡೆಯಾಗುತ್ತಿದೆ. ತೀರ್ಥಹಳ್ಳಿಯಲ್ಲಿ ಶಾಲಾ ಕಾಲೇಜುಗಳಿಗೆ ತಹಶೀಲ್ದಾರ್ ಜಕ್ಕಣ್ಣ ಗೌಡರ್ ರಜೆ ಘೋಷಿಸಿದ್ದಾರೆ. ಇದು ಆಯಾ ತಾಲೂಕಿನ ಅಂಗನವಾಡಿಗಳಿಗೂ ರಜೆ ಅನ್ವಯವಾಗಲಿದೆ.
ಇದನ್ಬೂ ಓದಿ-https://www.suddilive.in/2024/07/blog-post_767.html