ಮೆಗ್ಗಾನ್ ನರ್ಸಿಂಗ್ ಆಫೀಸರ್ ಹೇಮ |
ಸುದ್ದಿಲೈವ್/ಶಿವಮೊಗ್ಗ
ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಭದ್ರಾವತಿಯ ನಿವಾಸಿ ಹಾಗೂ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಹೇಮಾ(45) ಎಂಬುವರು ಅಸುನೀಗಿದ್ದಾರೆ.
25 ದಿನಗಳ ಹಿಂದೆ ಹೇಮಾರವರಿಗೆ ಜ್ವರ ಬರೋದು ಹೋಗೋದು ಆಗ್ತಾ ಇತ್ತು. ಪರಿಣಾಮ ಹೇಮಾರವರು ಎಲ್ಲಾ ಆಸ್ಪತ್ರೆಗೆ ಹೋಗಿ ಬಂದಿದ್ದಾರೆ. ಈ ನಡುವೆ ಜ್ವರ ಕಡಿಮೆಯಾದ ವೇಳೆ ಕಾರಣ ಎರಡು ಮೂರು ಬಾರಿ ಕೆಲಸಕ್ಕೆ ಬಂದು ಹೋಗಿದ್ದಾರೆ.
ಜ್ವರ ನೆತ್ತಿಗೆ ಏರಿದೆ. ಪರಿಣಾಮ ಹೇಮಾರವರು ಕೋಮಕ್ಕೆ ಹೋಗಿದ್ದಾರೆ. ನಿನ್ನೆ ಮಧ್ಯಾಹ್ನದಿಂದಲೇ ವೆಂಟಿಲೇಟರ್ ಹಾಕಲಾಗಿತ್ತು. ಈ ಮಧ್ಯೆ ಹೇಮಾರವರ ಕುಟುಂಬ ಖಾಸಗಿ ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯಲು ಯೋಚಿಸಿದ್ದಾರೆ. ಕೊನೆಗೆ ಮೆಗ್ಗಾನ್ ಗೆ ಕರೆತರಲಾಗಿದೆ. ಕರೆತರುವಾಗಲೇ ಹೇಮ ಕೊನೆ ಉಸಿರು ಎಳೆದಿದ್ದಾರೆ. ಮೆಗ್ಗಾನ್ ನಲ್ಲಿ ಬ್ರಾಟ್ ಡೆಡ್ ಎಂದು ದಾಖಲಿಸಿಕೊಳ್ಳಲಾಗಿದೆ.
ಶಂಕಿತ ಡೆಂಗ್ಯೂ ಜೊತೆಗೆ ಬೇರೆ ಸಮಸ್ಯೆಯಿಂದಲೂ ಹೇಮಾರವರು ಬಳಲುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ. ಕುಟುಂಬ ಮತ್ತು ಮೆಗ್ಗಾನ್ ಸಿಬ್ಬಂದಿ ಗಳು ಹೇಮಾರವರ ಅಗಲಿಕೆಯಿಂದ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ-https://www.suddilive.in/2024/07/blog-post_123.html