ಪ್ಯಾಸೆಂಜರ್ ಆಟೋದಲ್ಲಿ ಲಾಂಗ್ ಪತ್ತೆ-ಮೂವರ ಬಂಧನ



ಸುದ್ದಿಲೈವ್/ಶಿವಮೊಗ್ಗ


ಬೊಮ್ಮನ್ ಕಟ್ಟೆಯ ಕೊನೆಯ ಬಸ್ ಸ್ಟಾಫ್ ನಲ್ಲಿ ವಿನೋಬ ನಗರ ಪಿಐ ಚಂದ್ರಕಲಾರವರ ನೇತೃತ್ವದಲ್ಲಿ ನಡೆದ ತಪಾಸಣೆವೇಳೆ ಪ್ಯಾಸೆಂಜರ್    ಆಟೋವೊಂದರಲ್ಲಿ  ಮಾರಕಾಸ್ತ್ರಗಳು ಪತ್ತೆಯಾಗಿವೆ.‌


ನಿನ್ನೆ ಬೊಮ್ಮನ್ ಕಟ್ಟೆಯ ಕೊನೆ ಬಸ್ ಸ್ಟಾಪ್ ನಲ್ಲಿ ವಿನೋಬ ನಗರ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಹಳದಿ ಮತ್ತು ಹಸಿರು ಬಣ್ಣದ ಕೆಎ 14 ಸಿ 7654 ಪ್ಯಾಸೆಂಜರ್ ಆಟೋವೊಂದು ಬಂದಿದೆ. 


ಪೊಲೀಸರನ್ನ ಕಂಡು ಆಟೋದಲ್ಲಿದ್ದ ಮೂವರು ಪರಾರಿಯಾಗಲು ಯತ್ನಿಸಿದ್ದಾರೆ. ಪರಾರಿಯಾಗಲು ಯತ್ನಿಸಿದ ಅವರನ್ನ ಪೊಲೀಸರು ಹಿಡಿದು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ 2 ಅಡಿ ಉದ್ದದ ಲಾಂಗು ಆಟೋ ಸೀಟಿನಲ್ಲಿ ಪತ್ತೆಯಾಗಿದೆ. 


ಶಮಂತ ಯಾನೆ ಶಮಂತ್ ನಾಯ್ಕ್, ರವಿ ಯಾನೆ ಬೆಕ್ಕು ಹಾಗೂ ಅಕ್ಬರ್ ನ್ನ ಪೊಲೀಸರು ಬಂಧಿಸಿದ್ದಾರೆ. ಆಟೋ ಮತ್ತು ಲಾಂಗನ್ನ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ವಿನೋಬ ನಗರ ಠಾಣೆಯ ಪಿಎಸ್ಐ ಸುನೀಲ್ ಬಿ.ಸಿ, ಸಿಬ್ಬಂದಿಗಳಾದ ಸುರೇಶ್, ಚಂದ್ರನಾಯ್ಕ್, ಅರುಣ್ ಕುಮಾರ್ ಮಲ್ಲಪ್ಪ, ಭಾಗಿಯಾಗಿದ್ದರು.‌


ಇದನ್ನೂ ಓದಿ-https://www.suddilive.in/2024/07/blog-post_157.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು