ಏರ್ ಪೋರ್ಟ್ ರಸ್ತೆ ಬಂದ್ ಆಗುತ್ತಾ?

ಸುದ್ದಿಲೈವ್/ಶಿವಮೊಗ್ಗ

ಹಾಲಿ ಏರ್ ಪೋರ್ಟ್ ರಸ್ತೆಯನ್ನ ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದ್ದು ಜಾಗ ಪಡೆದವರು ಎನ್ ಆರ್ ಪುರ ರಸ್ತೆಯನ್ನ ಸ್ಥಗಿತ ಮಾಡುತ್ತಿರುವ ಆತಂಕವನ್ನ ರಘುನಾಥ್ ಎಂಬುವರು ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡೆಸಿದ್ದಾರೆ.‌

ಊರುಗಡೂರು 103 ಸರ್ವೆ ನಂಬರ್ 1961 ರಲ್ಲಿ ಎಂಆರ್ ಎಸ್ ರಸ್ತೆಯ 1.22 ಎಕರೆ ಗುಂಟ ಕೆಪಿಟಿಸಿಎಲ್ ಪಡೆಯುತ್ತಾರೆ. ಇದರ ಪರಿಹಾರ ಹಣ ಪಡೆಯಲಾಗಿತ್ತು. ಉಳಿದ 3.15 ಎಕರೆ ಜಮೀನು ಇರುತ್ತದೆ. ಬೊಮ್ಮಣ್ಣ ಗೇಣಿ ಮಾಡುತ್ತಿದ್ದ ರಘುನಾಥ್ ಉಳುವವನೇ ಭೂಮಿ ಒಡೆಯ ಒಡೆಯ 1974 ರಲ್ಲಿ ಕಾಯ್ದೆ ಅಡಿ ಬೊಮ್ಮಣ್ಣನಿಗೆ ಭೂಮಿ ಆಗುತ್ತದೆ.

ಬೊಮ್ಮಣ್ಣನಿಗಿಂತ ಮೊದಲು ಗೇಣಿ ಮಾಡುತ್ತಿದ್ದ ರೇವಣ್ಣನ ಪತ್ನಿ ರೇವಣ್ಣನಂತರ ಬೊಮ್ಮಣ್ಣನೇ ಭೂಮಿ ಊಳುತ್ತಿದ್ದಾನೆ ಎಂದು ಹೇಳಿಕೆ ಕೊಡುತ್ತಾಳೆ. ಯಾವುದೇ ಗೇಣಿ ಮಾಡುತ್ತಿಲ್ಲ ಎಂದು ರೇವಣ್ಣನ ಪತ್ನಿ ಬರೆದುಕೊಡುತ್ತಾಳೆ. ಇದರಲ್ಲಿ 23 ಗುಂಟೆ ನಿಂಗಪ್ಪ, ಭೀಮಪ್ಪ, ಮಲ್ಲಪ್ಪ ಇತರರು ಸಾಗುವಳಿ ಮಾಡುತ್ತಿದ್ದರು.

1991 ರಲ್ಲಿ ರಂಗಮ್ಮ ಸರ್ವೆ ನಂಬರ್ 103 ರಲ್ಲಿ 1 ಎಕರೆ ಗೇಣಿ ಮಾಡುತ್ತಿದ್ದೇನೆಂದು ಲ್ಯಾಂಡ್ ಟ್ರಿಬ್ಯುನಲ್ ಗೆ ಅರ್ಜಿ ಬರೆದ ರೇವಣ್ಣನ ಪತ್ನಿ 1 ಎಕರೆ ಲ್ಯಾಂಡ್ ಟ್ರಿಬ್ಯೂನಲ್ ಆದೇಶ ಮಾಡಿಕೊಳ್ಳುತ್ತಾರೆ. ಸ್ಥಳ ಪರಿಶೀಲನೆಗೆ ಬಂದ ತಹಶೀಲ್ದಾರ್ ಫಾರಂ ನಂ 10 ಕೊಡಲು ರಂಗಮ್ಮನಿಗೆ ನಿರಾಕರಿಸುತ್ತಾರೆ. ನಿಂಗಪ್ಪ, ಭೀಮಪ್ಪ, ಮಲ್ಲಪ್ಪ ಇತರರು ಸಾಗುವಳಿ ಮಾಡುವುದು ಗಮನಕ್ಕೆ ಬಂದು ನಿರಾಕರಿಸುತ್ತಾರೆ.‌
ಇದು ನ್ಯಾಯಾಲಯಕ್ಕೆ ಹೋಗಿ ನ್ಯಾಯಾಲಯದಲ್ಲಿ ರೇವಣ್ಣನವರ ಪತ್ನಿ ರಂಗಮ್ಮನ ಪರವಾಗಿ ಶಿವಮೊಗ್ಗ ಸಿವಿಲ್ ನ್ಯಾಯಾಲಯ ಕಿರಿಯ ವಿಭಾಗ ರಂಗಮ್ಮ ನಂತೆ ಆದೇಶವಾಗಿರುತ್ತದೆ.

ಇದನ್ನ ನೋಡಿದ ನಿಂಗಪ್ಪ, ಸೀನಪ್ಪ, ಭೀಮಪ್ಪ, ಮಲ್ಲೇಶ್, ನಾಗರಾಜ್ ರಿಟ್ ಅರ್ಜಿ ಹಾಕಿ ಹೈಕೋರ್ಟ್ ಗೆ ಪ್ರಕರಣ ದಾಖಲಿಸುತ್ತಾರೆ. ನ್ಯಾಯಾಂಗ ನಿಂದನೆಯಾಗಿದೆ. ಹೈಕೋರ್ಟ್ ನಲ್ಲಿ ರಂಗಮ್ಮನ ಪರವಾಗಿದ್ದ ಆದೇಶವನ್ನ ರದ್ದುಮಾಡಿ, ರಿಟ್ ಅರ್ಜಿ ಸಲ್ಲಿಸಿದವರ ಪರ ಹೈಕೋರ್ಟ್ ತೀರ್ಪು ನೀಡುತ್ತದೆ. ಇದರ್ಲಿ ಎನ್ ಆರ್ ಪುರ ರಸ್ತೆಗೆ ಭೂಮಿ ಸ್ವಾಧೀನವಾಗಿರುವ ವಿಚಾರವನ್ನ ಆದೇಶದಲ್ಲಿ ತಿಳಿಸಿರುತ್ತದೆ.

ರಂಗಮ್ಮ ನಿಧನ ನಂತರ ಮಕ್ಕಳಾದ ಬುಳ್ಳಮ್ಮ ಮತ್ತು ಇತರರು ಭೂಸ್ವಾಧೀನ ಪ್ರಕರಣದಲ್ಲಿ ಶಿವಮೊಗ್ಗದಲ್ಲಿ ಅರ್ಜಿ ಸಲ್ಲಿಸುತ್ತಾರೆ. ಹೈಕೋರ್ಟ್ ಶದೇಶವನ್ನ ಮರೆ ಮಾಚಿ ಅವರು ಅರ್ಜಿ ಸಲ್ಲಿಸಿದ್ದರಿಂದ ಪ್ರಕರಣ ಬಿದ್ದುಹೋಗುತ್ತದೆ. ಪ್ರಕರಣದಲ್ಲಿ ನ್ಯಾಯಲಯ ಬುಳ್ಳಮ್ಮ ಮತ್ತು ಬೋಪಣ್ಣನವರ ಮಕ್ಕಳಿಗೆ ದಂಡವಿಧಿಸುತ್ತದೆ.

ಇಷ್ಟಾದರೂ 2022 ರಲ್ಲಿ ಶಿವಮೊಗ್ಗ ಉಪವಿಭಾಗಾಧಿಕಾರಿಗಳಾದ ರವಿಚಂದ್ರ ನಾಯಕ್ ಹೈಕೋರ್ಟ್ ಆದೇಶವನ್ನ ತಿರಸ್ಕರಿಸಿ,ಫಾರಂ 10 ನೀಡದೆ ಆದೇಶದ ಮೇರೆಗೆ ಖಾತೆ ಮಾಡಿಕೊಟ್ಟಿದ್ದಾರೆ. ಇವರು ಭ್ರಷ್ಠಾಚಾರದ ಮೂಲಕ ನಡೆಸಿದ್ದಾರೆ ಎಂದು ಆರೋಪಿಸಿರುವ ರಘುನಾಥ್ ಡಿಡಿಎಲ್ ಆರ್ ಶ್ರೀನಿವಾಸ್, ಟಿ.ವಿಪ್ರಕಾಶ್ ಮೊದಲಾದವರು ತಪ್ಪಿತಸ್ಥರಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇದನ್ನೂ ಓದಿ-https://suddilive.in/archives/19559

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
Responsive Ad Banner