ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಚಕ್ರ ಸಾವೇಹಕ್ಲು ಭೂಮಿ ಸಂತ್ರಸ್ತರ ಪುನರ್ವಸತಿ ಜಾಗದ ವಿಚಾರದಲ್ಲಿ ಈ ಹಿಂದೆ ಪರ ವಿರೋಧದ ಚರ್ಚೆ, ಸುದ್ದಿಗೋಷ್ಠಿ, ಮನವಿ ಹಾಗೂ ಧರಣಿಗಳು ನಡೆದಿವೆ. ಈಗ ಈ ಪ್ರಕರಣದಲ್ಲಿ ಸುಬ್ರಹ್ಮಣ್ಯರ ವಿರುದ್ಧ ತೀರ್ಥಹಳ್ಳಿಯ ಕುರುವಳ್ಳಿಯ ನಿವಾಸಿ ನಿಂಗಪ್ಪ ಗೌಡರು ಎಫ್ಐಆರ್ ದಾಖಲಿಸಿದ್ದಾರೆ.
ನಿಂಗಪ್ಪ ಗೌಡರು ಚಕ್ರ ಸಾವೇಹಕ್ಲು ಮುಳುಗಡೆ ಸಂತ್ರಸ್ತರಾಗಿದ್ದು ಹೊಸನಗರ ತಾಲೂಕಿನಮಳಲಿ ಗ್ರಾಮಸ್ಥರಾಗಿದ್ದಾರೆ. ಇವರ ಜಮೀನು ಚಕ್ರ ಸಾವೇಹಕ್ಕಲು ಜಲಾಶಯಕ್ಕೆ ಮುಳುಗಡೆಯಾಗಿದ್ದು ಇದಕ್ಕೆ ಪರಿಹಾರವಾಗಿ ಭೂಮಿ ನೀಡುವಂತೆ ಅರ್ಜಿ ಸಲ್ಲಿಸಿರುತ್ತಾರೆ.
ಎಕ್ಸಗ್ರೇಷಿಯಂ ಅಡಿ ಮಂಜೂರು ಮಾಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಅರ್ಜಿಗೆ ಅಗಸವಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 167 ಬ್ಲಾಕ್ ನಂಬರ್ 150 ರಲ್ಲಿ 3 ಎಕರೆ ಭೂಮಿ ಮಂಜುರಾಗಿದೆ. ಈ ಮಂಜೂರಾದ ಭೂಮಿಯನ್ನ ಸುಬ್ರಹ್ಮಣ್ಯ ಎಂಬುವರು ನಿಂಗಪ್ಪ ಗೌಡರ ನಕಲಿ ಸಹಿ ಮಾಡಿ ಮೂರು ಎಕರೆ ಜಮೀನು ಕಬಳಿಕೆ ಮಾಡಿದ್ದಾರೆ.
ಇದನ್ನಕೇಳಲು ಹೋದ ಗೌಡರಿಗೆ ಅವ್ಯಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ತುಂಗನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ-https://www.suddilive.in/2024/07/6_30.html