ತೀರ್ಥಹಳ್ಳಿಯಲ್ಲಿ ಕುಸಿಯುವ ಹಂತಕ್ಕೆ ತಲುಪಿದ ತಡೆಗೋಡೆ-ತನಿಖೆನಾ ಅಥವಾ ಅಡ್ಜಸ್ಟ್ ಮೆಂಟಾ ಪೊಲಿಟಿಕ್ಸಾ?

ಸುದ್ದಿಲೈವ್/ತೀರ್ಥಹಳ್ಳಿ

ಕುರುವಳ್ಳಿ-ಬಾಳೇಬೈಲಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಿರ್ಮಿಸಿರುವ 57 ಕೋಟಿ ವೆಚ್ಚದ ಬೈಪಾಸ್ ರಸ್ತೆ ಬಹುಶಃ ಒಂದು ಮಳೆಗಾಲನ್ನೂ ನೋಡಿಲ್ಲ,ಇಲ್ಲಿನ ತಡೆಗೋಡೆಗಳು ಕುಸಿಯುವ ಹಂತಕ್ಕೆ ಬಂದು ತಲುಪಿದೆ.

ಅಂದರೆ 2023ರಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ 57 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬದಲಿ ಮಾರ್ಗ ನಿರ್ಮಿಸಲಾಗಿತ್ತು. ಒಂದೇ ಮಳೆಗಾಲಕ್ಕೆ ಕುಸಿಯುತ್ತೆ ಎಂದರೆ ಇದರ ಗುಣಮಟ್ಟದ ಬಗ್ಗೆ ಅಚ್ಚರಿ ಮೂಡಿಸುತ್ತದೆ.

ವಾಲ್ಮೀಕಿ ಹಗರಣ, ಮೂಡಾ ಪ್ರಕರಣದ ಬಗ್ಗೆ ಪುಂಖಾನುಪುಂಕದ ಭಾಷಣ ಮಾಡುವ ಬಿಜೆಪಿ ಪಕ್ಷ ಒಮ್ಮೆ ತಮ್ಮ ಶಾಸಕ ಹಾಗೂ ಮಾಜಿ ಗೃಹ ಸಚಿವರ ಕ್ಷೇತ್ರದಲ್ಲಿ ಒಮ್ಮೆ ಬಂದು ನೋಡಿಕೊಂಡು ಹೋದರೆ ಬಹುಶಃ ಭ್ರಷ್ಠಾಚಾರದ ಬಗ್ಗೆನೇ ಮಾತನಾಡುವುದನ್ನ ನಿಲ್ಲಿಸಿ ಬಿಡಬಹುದೇನೋ.

ಇದೊಂದೇ ಪ್ರಕರಣ ಅಲ್ಲ ಅನಿಸುತ್ತೆ. ಕಾಂಗ್ರೆಸ್ ಪಕ್ಷ ಈಗಾಗಲೇ ತೀರ್ಥಹಳ್ಳಿಯಲ್ಲಿ ಸರ್ಕಾರಿ ಕಟ್ಟಡಗಳ ನ್ನ ನಿರ್ಮಿಸಿ ಉದ್ಘಾಟನೆಗೆ ಸಜ್ಜುಗೊಂಡಿದ್ದರೂ ಸೋರುವಿಕೆಯ ಬಗ್ಗೆ ಆಕ್ಷೇಪಿಸಿತ್ತು. ಉದ್ಘಾಟನೆಯ ಕಾರ್ಯಕ್ರಮದಲ್ಲಿ ಈ ಸೋರುವಿಕೆಯ ಬಗ್ಗೆ ಪ್ರಸ್ತಾಪ ನಡೆದು ಪರ ವಿರೋಧಗಳ ಚರ್ಚೆಗೆ ಗ್ರಾಸವಾಗಿತ್ತು.

ಆದರೆ ನೂರಾರು ಕೋಟಿ ವೆಚ್ಚದ ಹಣದಲ್ಲಿ ಕಟ್ಟಿದ ಸರ್ಕಾರಿ ಕೊಠಡಿಗಳೇ ಸೋರುತ್ತಿದೆ. ಇವೆಲ್ಲವೂ ಬಿಜೆಪಿ ಕಾಲದ ಕಾಮಗಾರಿ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ. ಆದರೆ ಕೋಟಿಗಟ್ಟಲೆ ಸೇತುವೆ ಕುಸಿಯುವ ಹಂತಕ್ಕೆ ಬಂದಿದೆ. ಕಾಂಗ್ರೆಸ್ ಕೇವಲ ಆಕ್ಷೇಪ ಮಾಡುತ್ತಿದೆ ವಿನಃ ಅದೂ ಸಹ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡುತ್ತಿರುವ ಅನುಮಾನವೂ ಶುರುವಾಗಿದೆ.

ಶಿವಮೊಗ್ಗದಲ್ಲಿಯೇ ಸ್ಮಾರ್ಟ್ ಸಿಟಿ ಕಾಮಗಾರಿ ತನಿಖೆ ಮಾಡುವುದಾಗಿ ಹೇಳಿದ ಸರ್ಕಾರ ಎಲ್ಲಿ ತನಿಖೆ ಮಾಡುತ್ತಿದೆ ಎಂಬುದರ ಬಗ್ಗೆ ದುರಬಿನ್ ಹಾಕಿ ಹುಡುಕಬೇಕಾಗಿದೆ. ವಿಮಾನ ನಿಲ್ದಾಣದ ಕಾಮಗಾರಿ ದುಬಾರಿ ಆಗಿದೆ. ಇದರಲ್ಲೂ ಭ್ರಷ್ಠಾಚಾರದ ಬಗ್ಗೆ ಆಕ್ಷೇಪಿಸಿದ ಕಾಂಗ್ರೆಸ್ ನಾಯಕರೇ ವಿಧಾನ ಪರಿಷತ್ ಕಲಾಪದಲ್ಲಿ ತನಿಖೆಗೆ ಆಗ್ರಹಿಸಿದ್ದರು.

ಅದೂ ತನಿಖೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ತನಿಖೆಯ ಹೆಸರೇ ಇಲ್ಲದಂತಾಗಿದೆ. ಒಟ್ಟಿನಲ್ಲಿ ಎರಡೂ ಪಕ್ಷಗಳ ಹೊಂದಾಣಿಕೆ ರಾಜಕಾರಣದಲ್ಲಿ ಮತದಾರರು ಮತ್ತು ಕಾರ್ಯಕರ್ತರು ಎರಡೂ ಪಕ್ಷಗಳ ಆಟ ನೋಡಿ ಬೆರಗಾಗುವಂತೆ ಮಾಡಿದೆ.

ಇದನ್ನೂ ಓದಿ-https://suddilive.in/archives/19380

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close