ಸುದ್ದಿಲೈವ್/ಶಿವಮೊಗ್ಗ
ಮಳೆಗೆ ನದಿ ಹಳ್ಳ ಕೊಳ್ಳ ಕೆರೆಗಳು ಜಲಾಶಯಗಳು ಭರ್ತಿಯಾಗುತ್ತಿದೆ. ಪುನರ್ವಸು ಮಳೆಗೆ ಅಂಜನಾಪುರ ಡ್ಯಾಂ ಕೋಡಿಬಿದ್ದಿದೆ. ಕೋಡಿ ಬಿದ್ದ ಹಿನ್ನಲೆಯಲ್ಲಿ ಶಾಸಕರು ಮತ್ತು ಸಂಸದರು ಬಾಗಿನ ಅರ್ಪಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆ ಹಮ್ಮಿಕೊಂಡಿದ್ದ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಹಾಗೂ ಸಂಸದ ಬಿ.ವೈ ರಾಘವೇಂದ್ರ ಜೊತೆಯಲ್ಲೇ ಬಂದು ಬಾಗಿನ ಅರ್ಪಿಸಿದರು.
ಶಿಕಾರಿಪುರ ತಾಲ್ಲೂಕಿನಾದ್ಯಂತ ಉತ್ತಮ ವರ್ಷಧಾರೆ ಹಿನ್ನಲೆಯಲ್ಲಿ ತಾಲ್ಲೂಕಿನ ಕುಮಧ್ವತಿಯ ಅಂಜನಾಪುರ ಜಲಾಶಯ ಭರ್ತಿಯಾಗಿ ತನ್ನ ವೈಭವವನ್ನು ಮರಳಿ ಪಡೆದಿದೆ. ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮವನ್ನ ಬಿ.ವೈ.ವಿಜೇಂದ್ರ ಉದ್ಘಾಟಿಸಿದರು. ದಂಪತಿ ಸಮೇತರಾಗಿ ಆಗಮಿಸಿದ ಸಹೋರರು ಮೈದುಂಬಿ ಹರಿಯುತ್ತಿರುವ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಗುರುಮೂರ್ತಿ ಅವರು, ಶ್ರೀ ಹುಲ್ಮಾರು ಮಹೇಶ್ ಅವರು, ಶ್ರೀ ಹನುಮಂತಪ್ಪ ಅವರು, ಶ್ರೀ ಸಿದ್ಧಲಿಂಗ ಅವರು, ಶ್ರೀ ಚನ್ನವೀರಪ್ಪ ಅವರು, ಶ್ರೀ ಭೂಕಾಂತ್ ಅವರು, ಶ್ರೀ ಗಾಯತ್ರಿ ಮಲ್ಲಪ್ಪ ಅವರು ಸೇರಿದಂತೆ ತಾಲ್ಲೂಕಿನ ಎಲ್ಲಾ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/19537