ಪ್ರಚೋದನಕಾರಿ ವಿಡಿಯೋ-ಎರಡನೇ ಎಫ್ಐಆರ್ ದಾಖಲು

 


ಸುದ್ದಿಲೈವ್/ಶಿವಮೊಗ್ಗ


ಕೊಲ್ಲಾಪುರದಲ್ಲಿ ಮಸೀದಿಯ ಮೇಲೆ ಉದ್ರಿಕ್ತರ ಗುಂಪೊಂದು ದಾಳಿ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ 6 ದಿನಗಳ ಹಿಂದೆ ದಾಖಲಾಗಿದ್ದ ಎಫ್ಐಆರ್ ಬೆನ್ನಲ್ಲೇ ಮತ್ತೊಂದು ಎಫ್ಐಆರ್ ದಾಖಲಾಗಿದೆ.  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಪ್ರಚೋದನೆ, ಕೋಮು ಸೌಹಾರ್ಧತೆಗೆ ಧಕ್ಕೆತರುವ  ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸು-ಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕೊಲ್ಲಾಪುರದ ರಜಾ ಜಾಮಾ ಮಸೀದಿಯಲ್ಲಿ ನಡೆದ ಘಟನೆ ಎಂದು ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಯುವಕರು ಕೊಲ್ಲಾಪುರದಲ್ಲಿ ಮಸೀದಿಯನ್ನ ಒಡೆದು ಹಾಕಲಾಗುತ್ತಿದೆ. ಎಲ್ಲಿ ಮುಸ್ಲೀಂರು ಹೆಚ್ಚಿನ ಜನಸಂಖ್ಯೆ ಇಲ್ಲವೋ ಅಲ್ಲಿ ಕೆಲವರು ಪುಡಾಂಡಿಕೆ ಮೆರೆಯುತ್ತಿದ್ದಾರೆ. 


ಮಸೀದಿಯನ್ನ ಒಡೆದು ಹಾಕಲಾಗುತ್ತಿರುವವರ ಮನೆಗೆ ನುಗ್ಗಿ ಒಡಿಯಬೇಕು ಎಂಬಿತ್ಯಾದಿಯ ಬಗ್ಗೆ ಅವ್ಯಾಚ್ಯಶಬ್ದಗಳಿಂದ ನಿಂದಿಸಿ ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರು ಸೂಳೆಬೈಲಿನ ಯುವಕರು ವಿಡಿಯೋ ಅಪಲೋಡ್ ಮಾಡಿದ್ದರು.‌ ಇಬ್ಬರಲ್ಲಿ ಒಬ್ಬನ ಬಗ್ಗೆ ಪತ್ತೆಯಾಗಿತ್ತು. 


ಇಬ್ಬರು ಯುವಕರು ಎರಡು ಧರ್ಮದ ನಡುವೆ ಶತೃತ್ವ ಬೆಳೆಸುವ ನಿಟ್ಟಿನಲ್ಲಿ, ಕೋಮುದ್ವೇಷ ಹರಡುವ ಉದ್ದೇಶದಿಂದ ಸಮಾನ ಮನಸ್ಕರಾಗಿದ್ದು ಇಬ್ವರ ವಿರುದ್ಧ ಕಾನೂನು ಕ್ರಮ‌ ಜರಗಿಸುವಂತೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Akhil_bhai_786 ಇನ್‌ಸ್ಟಾ ಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ಈತನ ಬೆನ್ನ ಹಿಂದೆ ಇಮ್ರಾನ್, ಸಿದ್ದಿಕ್ ಮತ್ತು ಶೀನ್ ಎಂಬ ಯುವಕರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಲವು ವಿಡಿಯೋ ಹಾಕಿದ್ದು ಇದರಲ್ಲಿ ಕೆಲ ವಿಡಿಯೋಗಳು ಕೋಮು ಸೌಹಾರ್ಧಗಳಿಗೆ ಧಕ್ಕೆ ತರುವ ಮತ್ತು ಸಾರ್ವಜನಿಕರಿಗೆ ಬೆದರಿಕೆ ಹಾಕುವ ವಿಡಿಯೋಗಳನ್ನ ಅಪ್ಲೋಡ್ ಮಾಡಿರುವುದಾಗಿ ಪೊಲೀಸರಿಗೆ ತಿಳಿದು ಬಂದಿದೆ.


ಮಸೀದಿ ಧ್ವಂಸ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇವರೆಲ್ಲರೂ ಮತ್ತು ಇತರರು ಸೇರಿಕೊಂಡು, ಬೇರೆ ಮಸೀದಿಗಳಲ್ಲಿನ ದಾಂಧಲೆಗಳ ವಿಡಿಯೋಗಳನ್ನ ಬಳಸಿಕೊಂಡು ಅನ್ಯ ಧರ್ಮದವರ ವಿರುದ್ಧ ಪ್ರಚೋದನಕಾರಿ ಮಾತುಗಳನ್ನ ವಿಡಿಯೋದಲ್ಲಿ ಹರಿಬಿಟ್ಟದ್ದರಿಂದ ಇವರ ವಿರುದ್ಧ ಮತ್ತೊಂದು ಎಫ್ಐಆರ್ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಇದನ್ನೂ ಓದಿ-https://www.suddilive.in/2024/07/blog-post_441.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು