ಸುದ್ದಿಲೈವ್/ಭದ್ರಾವತಿ
ಇಲ್ಲಿನ ಕುವೆಂಪು ವಿಶ್ವವಿದ್ಯಾಲಯ ದ ಆವರದಲ್ಲೇ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಯಹತ್ಯೆಗೆ ಯತ್ನಿಸಿರುವ ಘಟನೆ ನಿನ್ನೆ ಸಂಜೆ ನಡೆದಿದೆ
ಕಾಲೇಜಿನ ಕ್ಲಾಸ್ ರೂಮಿನ ಒಳಗೆ ಯತ್ನಿಸಿರುವ ವಿದ್ಯಾರ್ಥಿ 10 ಪುಟದ ಡೆತ್ ನೋಟ್ ಬರೆದು ಸ್ನೇಹಿತರ ವಾಟ್ಸಪ್ ಗ್ರೂಪ್ ಗೆ ಹಂಚಿ ಆತ್ಮಹತ್ಯೆ ಯತ್ನಕ್ಕೆ ಯತ್ನಿಸಿದ್ದಾನೆ.
ಕುವೆಂಪು ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಉಟೋಪಚಾರಗಳು ಸರಿಯಿಲ್ಲ ಎಂದು ಆರೋಪಿಸಿ ಆತ್ಮಹತ್ಯೆಗೆ ವಿದ್ಯಾರ್ಥಿ ಕೈಹಾಕಿದ್ದಾನೆ. ಆತನನ್ನ ತಕ್ಷಣ ಮೆಗ್ಗಾನ್ ಗೆ ಸಾಗಿಸಲಾಗಿದೆ. ಆದರೆ ವಿದ್ಯಾರ್ಥಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
“ವಿದ್ಯಾರ್ಥಿಯು ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಗೊತ್ತಾಗಿತ್ತು. ವಿಶ್ವವಿದ್ಯಾಲಯದಿಂದ ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಪಾಲಕರಿಗೂ ಮಾಹಿತಿ ನೀಡಲಾಗಿದೆ. ಆರೋಗ್ಯ ಸಮಸ್ಯೆಯ ಕಾರಣಕ್ಕೆ ಆತ್ಮಹತ್ಯೆಗೆ ಪ್ರಯತ್ನ ಎಂದು ಹೇಳಲಾಗಿತ್ತು. ಡೆತ್‌ನೋಟ್ ಬರೆದು ವಾಟ್ಸ್ಆ್ಯಪ್‌ನಲ್ಲಿ ಶೇರ್ ಮಾಡಿರುವ ಸಂಗತಿ ಗೊತ್ತಿರಲಿಲ್ಲ. ವಿದ್ಯಾರ್ಥಿಯ ಆತ್ಮಹತ್ಯೆ ಯತ್ನದ ವಿಷಯವನ್ನು ಕುಲಪತಿ ಅವರ ಗಮನಕ್ಕೂ ತರಲಾಗಿದೆ’ ಎಂದು ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಸತ್ಯಪ್ರಕಾಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ವಿದ್ಯಾರ್ಥಿಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವುದನ್ನ ಖಂಡಿಸಿ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದೆ. ನಾನು ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಂಬಂಧಿ ಎಂದು ಬೃದಿರುವುದು ತಲ್ಲಣ ಮೂಡಿದೆ.
ಇದನ್ನೂ ಓದಿ-https://suddilive.in/archives/18979