ಅಶ್ವಿನ್ ಕಡ್ಡಿಪುಡ್ಡಿ ಸ್ಪರ್ಧೆ ಖಚಿತ

 ಸುದ್ದಿಲೈವ್/ಶಿವಮೊಗ್ಗ


ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ 2024-29 ರ ವರೆಗಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಜು.21 ರಂದು ಎನ್ ಡಿ ವಿ ಹಾಸ್ಟೆಲ್ ನಲ್ಲಿ ಚುನಾವಣೆ ನಡೆಯಲಿದೆ. 


ಚುನಾವಣೆ ರಂಗೇರಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅಶ್ವಿನಿ (ಕಡ್ಡಿಪುಡಿ) ಕಳೆದ 15 ವರ್ಷದಿಂದ ಮಹಾಸಭಾದ ಅಧ್ಯಕ್ಷರಾಗಿ ರುದ್ರಮುನಿಯವರೇ ಆಯ್ಕೆಯಾಗುತ್ತಿದ್ದಾರೆ. ಅವರ ಮೇಲೆ ವಿಶ್ವಾಸವಿಲ್ಲದ ಕಾರಣ ಈ ಬಾರಿ ಚುನಾವಣೆ ಅನಿವಾರ್ಯವಾಗಿದೆ ಎಂದರು.   


ಕಳೆದ ಬಾರಿ ಸ್ಪರ್ಧಿಸಿದಾಗ ಸ್ವಾಮೀಜಿಗಳ ನೇತೃತ್ವದಲ್ಲಿ ಒಡಂಬಂಡಿಕೆಯಾಗಿ  ಚುನಾವಣೆ ಸ್ಪರ್ಧಿಸಿಲ್ಲ. ಸ್ಪರ್ಧೆಯಿಂದ ದೂರ ಉಳಿದ ಪರಿಣಾಮ ರುದ್ರಮುನಿ ಸಜ್ಜನ್ ಮೂರು ಬಾರಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. 

ಇದನ್ನೂ ಓದಿ-http://www.suddilive.in/2024/07/blog-post_247.html

ಸರ್ವಾಧಿಕಾರಿ ಮೆರೆದ ರುದ್ರಮುನಿಯವರು 30 ಜನ ನಿರ್ದೇಶಕರನ್ನ ವಿಶ್ವಾಸಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಕಾರಣ ಸ್ಪರ್ಧೆ ಈ ಬಾರಿ ಅನಿವಾರ್ಯವಾಗಿದೆ. ಶಿಕಾರಿಪುರದ ನಿವಾಸಿಯಾಗಿರುವ ಇವರು ಕಳೆದ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಕನಿಷ್ಠ 10 ನಿರ್ದೇಶಕರನ್ನ ಆಯ್ಕೆ ಮಾಡಲು ಸಾಧ್ಯವಾಗಿತ್ತು ಎಂದರು


ಶಿಕಾರಿಪುರದ ಮತ್ತಿಕಟ್ಟೆಯಲ್ಲಿ ಗ್ರಾಪಂ ಸದಸ್ಯರಾಗಿದ್ದರು. ನಂತರ ಅಧ್ಯಕ್ಷರೂ ಆದರು. ಗ್ರಾಪಂ ಚುನಯಿತ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಶ್ವಿನ್ ಈ ಬಾರಿ ಪ್ರಬಲ ಪ್ರತಿಸ್ಪರ್ಧೆಯಾಗಿ ಕಣದಲ್ಲಿ ಇಳಿದಿದ್ದಾರೆ. 


ಆಯ್ಕೆಯಾದ ನಂತರ ಸಮಾಜದ ಸಂಘಟನೆಗಾಗಿ ಜಿಲ್ಲಾಧ್ಯಂತ ಸಂಚರಿಸಿ ಹೆಚ್ಚು ಸದಸ್ಯರನ್ನ ನೋಂದಾಯಿಸುವುದು. ಜಿಲ್ಲೆಯಾದ್ಯಂತ ವೀರಶೈವ ರುದ್ರಭೂಮಿ ನಿರ್ಮಾಣ, ಸ್ಪರ್ಧಾತ್ಮ


ಕ ಪರೀಕ್ಷೆಗಳಿಗೆ ಕೋಚಿಂಗ್ ವ್ಯವಸ್ಥೆ. ಧರ್ಮದ ಆಚರಣೆ ಬಗ್ಗೆ ಬಾಂಧವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುವುದು ಸೇರಿದಂತೆ ಹಲವು ಯೋಜನೆಗಳನ್ನ‌ ಹಮ್ಮಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close