ಕೆಪಿಟಿಸಿಎಲ್ ಭೂನಷ್ಟ ಪರಿಹಾರ ಸಭೆ

ಸುದ್ದಿಲೈವ್/ಶಿವಮೊಗ್ಗ

ಕೆಪಿಟಿಸಿಎಲ್ 1×10 ಎಂವಿಎ, 110/11 ಕೆವಿ ಕಾಗೋಡು (ಹಿರೇನೆಲ್ಲುರು) ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ಸಂಬಂಧಿಸಿದಂತೆ, ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕು, ಶಿರೂರು, ಕಾನ್ಲೆ, ಹಿರೆನೆಲ್ಲೂರು ಗ್ರಾಮದ ಕಾನ್ಲೆ ಗ್ರಾಮದ ಸರ್ವೆ ನಂ.ಗಳಲ್ಲಿ ವಿದ್ಯುತ್ ಮಾರ್ಗ ಹಾದುಹೋಗುವುದರಿಂದ ಸಾಗರದ ಎಸಿ ಕಚೇರಿಯಲ್ಲಿ ಸಂತ್ರಸ್ತರ ಸಭೆ ನಡೆಯಲಿದೆ.

ಕಾನ್ಲೆ ಗ್ರಾಮದ ಸರ್ವೆ ನಂಬರ್  ಗಳಾದ 71, 72, 73, 74, 75, 76, 83, 84, 96, 97, 98, 99, 102, 103, 126, 127, 130, 131, 132, 133, 134, 135, 136, 140, 141, 142, 144, 145, 151, 152, 153, 154, 158, 191, 194, 195, 196, 194, 198, 199, 200, 201, 202, 223, 224, 225, 226, 227, 228, 229.

ಹಿರೆನೆಲ್ಲೂರು ಗ್ರಾಮದ ಸರ್ವೆ ನಂ. 245, 246, 247, 248, 250, 251, 252, 253, 254, 255, 259, 261, 262, 264, 265, 266. ಶಿರೂರು ಗ್ರಾಮದ ಸರ್ವೆ ನಂ. 74, 75. ಜಮೀನುಗಳಲ್ಲಿ 110ಕೆವಿ ವಿದ್ಯುತ್ ಮಾರ್ಗವು ಹಾದು ಹೋಗಲಿದೆ.

ಸಂಬಂಧಪಟ್ಟ ಭೂನಷ್ಟ ಭಾದಿತರಿಗೆ ಗೋಪುರದ ತಳಪಾಯ ಹಾಗೂ 110ಕೆವಿ ಮಾರ್ಗದ ಕಾರಿಡಾರ್ ಪರಿಹಾರ ನಿಗದಿಪಡಿಸಲು ಉಪವಿಭಾಗಾಧಿಕಾರಿಗಳು ಹಾಗೂ ಭೂ ಸ್ವಾಧೀನಾಧಿಕಾರಿಗಳು, ಸಾಗರ ಉಪ ವಿಭಾಗ, ಸಾಗರ ಶಿವಮೊಗ್ಗ ಜಿಲ್ಲೆ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11:00 ಗಂಟೆಗೆ ಉಪವಿಭಾಗಾಧಿಕಾರಿಗಳು ಕಛೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ಗ್ರಾಮಗಳ ಭೂನಷ್ಟ ಭಾದಿತರು ತಪ್ಪದೆ ಹಾಜರಾಗುವಂತೆ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/18469

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close