ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ತುಂಗಾ ನದಿಯ ಸೇತುವೆಯ ಮೇಲೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯ ಸಂಭವಿಸಿದ್ದು, ಬೈಕ್ ಸವಾರನಿಗೆ ತಲೆಗೆ ಪೆಟ್ಟು ಉಂಟಾಗಿದೆ.
ಶಿವಮೊಗ್ಗದ ಹಳೇಯ ಸೇತುವೆ ಮೇಲೆ ರಿಕ್ಷ ಮತ್ತು ಬೈಕ್ ನಡುವೆ ಡಿಕ್ಕಿ ಉಂಟಾಗಿದೆ. ಬೈಕ್ ಸವಾರನಿಗೆ ತಲೆಗೆ ಪೆಟ್ಟಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ವಿದ್ಯಾನಗರ ಕಡೆಯಿಂದ ಬರುತ್ತಿದ್ದರೆ, ಬೈಕ್ ಸವಾರ ಚನ್ನಗಿರಿಯಿಂದ ವಿದ್ಯಾನಗರ ಕಡೆ ತೆರಳುತ್ತಿದ್ದ ವೆಳೆ ಅಪಘಾತ ಸಂಭವಿಸಿದೆ.
ಡಬ್ಬಲ್ ಸೇತುವೆ ಇದ್ದರೂ ರಾತ್ರಿ ಹೊತ್ತು ಒಂದು ಸೇತುವೆ ಮುಚ್ಚಲಾಗುವುದು. ಪರಿಣಾಮ ದ್ವಿಮುಖ ಸಂಚಾರ ಒಂದೇ ಸೇತುವೆ ಮೇಲೆ ಸಂಚರಿಸುವುದರಿಂದ ಈ ಪರಿಣಾಮ ಉಂಟಾಗಿದೆ.
ಅಪಘಾತದಲ್ಲಿ ಆಟೋದಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬೈಕ್ ಸವಾರ ಚನ್ನಗಿರಿ ತಾಲೂಕಿನ ಬಸವನಹಳ್ಳಿ ಗ್ರಾಮದ ಯುವಕನೆಂದು ಗುರುತಿಸಲಾಗಿದೆ. ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ-https://suddilivesmg.blogspot.com/2024/07/blog-post_7.html