ಸುದ್ದಿಲೈವ್/ಶಿವಮೊಗ್ಗ
ತುಂಗನದಿಗೆ ವಿಪರಮೀತ ಒಳಹರಿವು ಹರಿದು ಬರುತ್ತಿರುವುದರಿಂದ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಪರಿಣಾಮ ನದಿಗೆ ಅಳವಡಿಸಿರುವ ಮೋಟಾರ್ ಗಳನ್ನ ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಸ್ಪಷ್ಟವಾದ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ನೀರಿನ ಮಟ್ಟ ಸಧ್ಯಕ್ಕೆ 27 ಅಡಿ ನೀರು ಹರಿಯುತ್ತಿದ್ದು ಇದರ ನೀರಿನ ಮಟ್ಟ ಹೆಚ್ಚಾಗಲಿದ್ದು ನದಿಗೆ ಅಳವಡಿಸಿರುವ ಮೋಟಾರ್ ಗಳನ್ನ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಕುಡಿಯುವ ನೀರಿನ ವಿತರಣೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಿಸಲಾಗಿದೆ.
ಎಷ್ಟುದಿನ ವ್ಯತ್ಯಯವಾಗಲಿದೆ, ಯಾವತ್ತು ಕುಡಿಯುವ ನೀರು ವ್ಯತ್ಯಯವಾಗಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಇಲಾಖೆಯ ಈ ಹಿಂದೆಯಿದ್ದ ಎಇಇ ನಿವೃತ್ತಿಯಾಗಿದ್ದಾರೆ. ಈಗ ಅವರ ಸ್ಥಾನಕ್ಕೆ ಪ್ರಭಾರಿ ಬಂದಿದ್ದಾರೆ.
ಅವರ ಸರ್ಕಾರಿ ಸಿಮ್ ಗೆ ಕರೆ ಮಾಡಿ ಮಾಹಿತಿ ಪಡೆಯೋಣ ಎಂದರೆ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರಿ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಆಗುತ್ತಿದೆ ಎಂದರೆ ಇಂತಹ ಅಧಿಕಾರಿಗಳ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಇದನ್ನೂ ಓದಿ-https://www.suddilive.in/2024/07/blog-post_475.html