ಸುದ್ದಿಲೈವ್/ಶಿವಮೊಗ್ಗ
ಕಳೆದ ತಿಂಗಳು ಕಂಪನಿಗೆ ಕಟ್ಟುವ ಹಣ ಕಳುವಾಗಿದ್ದು, ಆ ಹಣವನ್ನ ಕಟ್ಟುವುದಾಗಿ ಒಪ್ಪಿಕೊಂಡು ಮರುದಿನವೇ ವಿಷ ಸೇವಿಸಿದ್ದ ಪ್ರಕರಣದ ಬೆನ್ನಲ್ಲೇ, ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಂಪನಿಯ ಕಡೆಯಿಂದ ಹಣ ಸಂಗ್ರಹ ಮಾಡಿದ್ದ ಯುವಕನ ವಿರುದ್ಧವೇ ಹಣ ದುರ್ಬಳಕೆ ಮಾಡಿಕೊಂಡು ಕಂಪನಿಗೆ ವಂಚಿಸಿರುವುದಾಗಿ ದೂರು ದಾಖಲಾಗಿದೆ.
ಗೋಪಾಳದಲ್ಲಿ ಶಿಕಾಮರ್ಸ್ ಮಾರ್ಕೆಟಿ ಗ್ ಸರ್ವಿಸ್ ಪ್ರೈವೆಟ್ ರೆಮಿಟೆಡ್ ಕಂಪನಿಯಲ್ಲಿ ಸಂದೀಪ ಎಂಬ ಯುವಕನು ಕಂಪನಿಯ ಸಾಲದ ಮರುಪಾವತಿ ಹಣವಾದ 79735/- ರೂ.ವನ್ನ ಸಂಗ್ರಹಿಸಿ ಕಂಪನಿಗೆ ಕಟ್ಟಲು ತರುವ ವೇಳೆ ಶೌಚಕ್ಕೆ ಹೋಗಲು ಆತುರವಾಗಿತ್ತೆಂದು ದಾರಿ ಮಧ್ಯದಲ್ಲಿಯೇ ಬೈಕ್ ನಿಲ್ಲಿಸಿ ಶೌಚಕ್ಕೆ ಹೋಗಿದ್ದನು.
ಈ ವೇಳೆ 79735 ರೂ.ವಿದ್ದ ಬ್ಯಾಗ್ ಕಳ್ಳತನವಾಗಿತ್ತು. ಈ ಘಟನೆ ಜೂ. 5 ರಂದು ನಡೆದಿತ್ತು. ಈವಿಷಯವನ್ನ ಕಚೇರಿಯ ಸಿಬ್ವಂದಿಗೆ ಕರೆ ಮಾಡಿ ತಿಳಿಸಿದ್ದನು. ಸಿಬ್ವಂದಿಯವರುಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ನಂತರ ಸಂದೀಪ್ ಕಂಪನಿಗೆ ಹಣಕಟ್ಟುವುದಾಗಿ ತಿಳಿಸಿದ್ದರು.
ಜೂ.6 ರಂದು ಸಂದೀಪ್ ತಾಯಿ ಜೊತೆಗೆ ಬಂದು ಹಣಕಟ್ಟುವುದಾಗಿ ತಿಳಿಸಿದ್ದರು. ಆದರೆ ಅದೇ ದಿವಸ ರಾತ್ರಿ ಸಂದೀಪ್ ವಿಷ ಸೇವಿಸಿ ಕಂಪನಿಯ ವಿರುದ್ಧವೇ ದೂರು ದಾಖಲಿಸಿದ್ದನು ಎಂಬುದು ಕಂಪನಿಯ ಪರವಾಗಿ ನೀಡಿದ ಸಿಬ್ಬಂದಿಯಿಂದ ತುಂಗನಗರದ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಉಲ್ಲೇಕವಾಗಿದೆ.
ಇದಕ್ಕೆ ಪ್ರತಿ ಎಂಬಂತೆ ಸಂಸ್ಥೆ ಸಂದೀಪನ ವಿರುದ್ಧ ಕೆಲವು ಆರೋಪಮಾಡಿ ದೂರು ದಾಖಲಿಸಿದೆ. ಈ ಹಿಂದೆ ಸಂಸ್ಥೆಗೆ ತಿಳಿಯದ ಹಾಗೆ ಸಂದೀಪನು ಗ್ರಾಹಕರುಗಳಿಂದ ಸಾಲ ಕೂಡಿಸುತ್ತೇನೆಂದು ಇನ್ನೂ ರೆನ್ ಕಟ್ಟಿ ಎಂದು ಹೇಳಿ ಸುಮಾರು 30.390/- ರೂಪಾಯಿ ಗಳನ್ನು 21 ಗ್ರಾಹಕರಿಂದ ಪಡೆದಿರುತ್ತಾನೆ.
ಒಟ್ಟು 1.04609/- ರೂಪಾಯಿ ಹಣವನ್ನು ಸಂಸ್ಥೆಗೆ ಕಟ್ಟದೆ ಮೊಸ ಮಾಡಿ, ಗ್ರಾಹಕುಗೂ ನಂಬಿಸಿ ಅವರಿಗೂ ಮೋಸ ಮಾಡಿರುವುದಾಗಿ ಸಂಸ್ಥೆಯ ಪರವಾಗಿ ಗಂಗಾಧರ್ ಎಂಬುವರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/18508