ರಾತ್ರಿಯ ಮಳೆಗೆ ಜಲಾಶಯಗಳ ನೀರಿನಮಟ್ಟ ಏರಿಕೆ-ಕೆಲಬಡಾವಣೆಯಲ್ಲಿ ಎಚ್ಚರಿಕೆ

ಸುದ್ದಿಲೈವ್/ಶಿವಮೊಗ್ಗ

ರಾತ್ರಿಯಿಡಿ ಸುರಿದ ಮಳೆಗೆ ಶಿವಮೊಗ್ಗದಲ್ಲಿ ತುಂಗನದಿ ಮೈದುಂಬಿ ಹರಿಯುತ್ತಿದ್ದಾಳೆ. ನಗರದಲ್ಲಿ  ತುಂಗ ಭೋರ್ಗೆರೆಯಲು ಆರಂಭಿಸಿದ್ದಾಳೆ

ಗಾಜನೂರಿನ ತುಂಗ ಜಲಾಶಯಗಳಲ್ಲಿ 62000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ರಾತ್ರಿ 55 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಬೆಳಿಗ್ಗೆ ಇದರ ಮಟ್ಟ 7 ಸಾವಿರಕ್ಯೂಸೆಕ್ ಗೆ ಹೆಚ್ಚಳವಾಗಿದೆ.

ಇದರಿಂದ  ಇಮಾಮ್ ಬಾಡಾ, ಸೀಗೆಹಟ್ಟಿ, ಬಿಬಿ ಸ್ರೀಟ್ ಗಳಲ್ಲಿ ಎಚ್ಚರಿಕೆಯನ್ನ ಪಾಲಿಕೆ ನೀಡಿದೆ. 15 ದಿನಗಳಹಿಂದೆ ಪಾಲಿಕೆ ಎಚ್ಚರಿಕೆ ನೀಡಿತ್ತು. ಈ ಬಾರಿ ಮತ್ತೆ ಎಚ್ಚರಿಕೆ ನೀಡಲಾಗಿದ್ದು ಪಾಲಿಕೆ ರಕ್ಷಣ ತಂಡವನನೂ ರಚಿಸಿಕೊಂಡಿದೆ.

ಏರಿಕೆಯಾದ ಭದ್ರ ಜಲಾಶಯದ ನೀರಿನ ಮಟ್ಟ

ರಾತ್ರಿ ಇಡೀ ಸುರಿದ ಮಳೆಗೆ ಭದ್ರ ಜಲಾಶಯದಲ್ಲಿ 3.4 ಅಡಿ ನೀರು ಏರಿಕೆಯಾಗಿದೆ 141.3 ಅಡಿ ನೀರಿದ್ದ ಜಲಾಶಯದಲ್ಲಿ 27,839 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದುಇದರಿಂದ ಭದ್ರ ಜಲಾಶಯದ ಮಟ್ಟ 144.7 ಅಡಿ ಏರಿಕೆಯಾಗಿದೆ.  ಕಳೆದ ವರ್ಷ ಭದ್ರ ಜಲಾಶಯ 141.7 ಅಡಿ ನೀರು ಸಂಗ್ರಹವಾಗಿತ್ತು.

ಲಿಂಗನಮಕ್ಕಿ ಹಲಾಶಯಕ್ಕೆ 4 ಅಡಿ ನೀರು ಏರಿಕೆ

ತುಂಗ ಮತ್ತು ಭದ್ರ ಜಲಾಶಯಕ್ಕೆ ಹರಿದು ಬಂದ ದುಪ್ಪಟ್ಟು ನೀರು ಲಿಂಗನಮಕ್ಕಿ ಜಲಾಶಯಕ್ಕೆಹರಿದು ಬಂದಿದೆ. ಇಂದೇದಿನಕ್ಕೆ ಲಿಂಗನಮಕ್ಕಿಯ 4 ಅಡಿ ನೀರು ಸಂಗ್ರಹವಾಗಿದೆ. ನಿನ್ನೆ 1778.15 ಅಡಿ ನೀರುಸಂಗ್ರಹವಾಗಿತ್ತು.

ಇಂದು ಬೆಳಿಗ್ಗೆ ಜಲಾಶಯದ ನೀರಿನ ಮಟ್ಟ 1782.15 ಅಡಿಗೆ ಏರಿಕೆಯಾಗಿದೆ. ಕಳೆದ ವರ್ಷ ಈ ದಿನಕ್ಕೆ 1755.90, ಅಡಿ ನೀರು ಸಂಗ್ರಹವಾಗಿತ್ತು. 78911 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.

ಇದನ್ನೂ ಓದಿ-https://suddilive.in/archives/19421

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು