ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟ

ತುಂಗ ಜಲಾಶಯ,ಗಾಜನೂರು


 ಸುದ್ದಿಲೈವ್/ಶಿವಮೊಗ್ಗ, ಜು.22


ಕಳೆದ ವಾರ ಆರಂಭವಾದ ಮಳೆ ಆರ್ಭಟ ಕಡಿಮೆಯಾಗಿದೆ. ಇದರಿಂದ ಪ್ರಮುಖ ಜಲಾಶಯಗಳ ಮಟ್ಟ ಕುಸಿದಿದೆ. ಆದರೆ ನಿನ್ನೆಗಿಂತ ಭದ್ರ ನದಿಯ ಒಳಹರಿವು 2 ಸಾವಿರ ಕ್ಯೂಸೆಕ್ ನೀರು ಇಂದು ಹೆಚ್ಚಾಗಿದೆ.


ಭದ್ರನದಿಗೆ ಭಾನುವಾರ 23,674 ಒಳಹರಿವಿತ್ತು. ಇಂದು 25367 ಕ್ಯೂಸೆಕ್ ನೀರು ಹರಿದು ಬಂದಿದೆ. 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ನಿನ್ನೆ 164.4 ಅಡಿ ನೀರು ಸಂಗ್ರಹವಾದರೆ ಇಂದು 166.6 ಕ್ಯೂಸೆಕ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನ 144.2 ಅಡಿ ನೀರು ಸಂಗ್ರವಾಗಿತ್ತು.


ಅದರಂತೆ ತುಂಗ ನದಿಯ ಜಲಾಶಯಕ್ಕೆ 36 ಸಾವಿರದ 600 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನ ನದಿಗೂ ಮತ್ತು ತುಂಗ ಮೇಲ್ದಂಡೆಗೂ ಹರಿಸಲಾಗುತ್ತಿದೆ. ಜಲಾಶಯದಲ್ಲಿ 21 ಗೇಟನ್ನ ಅರ್ಧ ಅಡಿ ಎತ್ತರಿಸಿ ನದಿಗೆ ನೀರು ಹಾಯಿಸಲಾಗುತ್ತಿದೆ. ನಿನ್ನೆ 37290 ಕ್ಯೂಸೆಕ್ ನೀರು ಒಳಹರಿವಿತ್ತು. 


ಲಿಂಗನಮಕ್ಕಿಯಲ್ಲಿ ಇಂದು 44387 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಅಡಿ ಎತ್ತರದ ಜಲಾಶಯದಲ್ಲಿ ಇಂದು 1797.60 ಕ್ಯೂಸೆಕ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ 1767.30 ನೀರು ಸಂಗ್ರಹವಾಗಿತ್ತು. ನಿನ್ನೆ 48793 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು ಒಳಹರಿವು ಕೊಂಚ ತಗ್ಗಿದೆ. 

ಇದನ್ನೂ ಓದಿ-https://www.suddilive.in/2024/07/blog-post_569.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು