ಸುದ್ದಿಲೈವ್/ಶಿವಮೊಗ್ಗ
ಶಿಥಿಲತೆ ಹಿನ್ನಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಎರಡು ಮರಗಳು ಏಕಕಾಲಕ್ಕೆ ಬುಡಮೇಲಾಗಿ ವಿದ್ಯುತ್ ತಂತಿಯ ಮೇಲೆ ಉರಳಿಬಿದ್ದಿದೆ.
ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ವಾಲಿದೆ. ಆದರೆ ನರ್ಸ್ ಕ್ವಾಟ್ರಸ್ ನ ಮನೆಯ ಮುಂಭಾಗ ನಿಲ್ಲಿಸಿದ್ದ ಆಟೋ ಹಾನಿಗೊಳಗಾಗಿದೆ. ರಾಧಮ್ಮ ಪೆಂಚಾಲಯ್ಯ ವಾಸವಿರುವ ಈ ಮನೆಯ ಮುಂಭಾಗದ ಆಟೋ, ಸೈಕಲ್ ಗಳು ಹಾನಿಗೊಳಗಾಗಿದೆ.
ಬೆಳಿಗ್ಗೆ 7-30 ರ ಸುಮಾರಿಗೆ ಎರಡು ಮರ ಬುಡಮೇಲಾಗಿ ವಿದ್ಯುತ್ ತಂತಿಯ ಮೇಲೆ ಉರುಳಿದೆ. ತಂತಿಗಳು ಹರಿದುಬಿದ್ದಿದೆ. ಅದೃಷ್ಟವಶಾತ್ ತಂತಿ ಗಳು ಎಲ್ಲು ತಗುಲದೆ ಇದ್ದ ಕಾರಣ ಯಾವುದೇ ಪ್ರಾಣಹಾನಿಗಳು, ನೋವುಗಳು ಸಂಭವಿಸಿಲ್ಲ.
ಆರೋಗ್ಯ ಇಲಾಖೆಗೆ ಸೇರಿದ ಕ್ವಾಟ್ರಸ್ ಗಳು ಹೆಂಚಿನ ಮನೆಗಳಾಗಿದ್ದು, ಮನೆಯ ಮುಂಭಾಗದಲ್ಲಿ ಅನೇಕ ಮರಗಳು ಬೆಳೆದಿವೆ. ಇದರಲ್ಲಿ ಎರಡು ಮರಗಳು ಅಧಿಕ ಮಳೆಯಿಂದಾಗಿ ಬುಡಸಮೇತ ಉರುಳಿ ಬಿದ್ದಿದೆ.
ಈ ಕ್ವಾಟ್ರಸ್ ಆರೋಗ್ಯ ಮತ್ತು ಪೊಲೀಸ್ ಇಲಾಖೆ ನಡುವೆ ತಿಕ್ಕಾಟವಿದೆ. ರಾಧಮ್ಮ ಮತ್ತು ಪೆಂಚಾಲಯ್ಯ ಅನೇಕ ಬಾರಿ ಮಬೆ ಬದಲಿಸಿಕೊಡಿ ಎಂದು ಕೋರಿದ್ದರೂ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದು ರಾಧಮ್ಮ ಕಣ್ಣೀರಿಟ್ಟಿದ್ದಾರೆ
ಇದನ್ನೂ ಓದಿ-https://www.suddilive.in/2024/07/blog-post_187.html