ಚಕ್ರ ಸಾವೆಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿತಿಯ ಹೆಸರಿನಲ್ಲಿ ದೋಖಾ-ರಿಯಾಜ್ ಆರೋಪ

ಸುದ್ದಿಲೈವ್/ಶಿವಮೊಗ್ಗ


ಚಕ್ರ ಸಾವೆಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿತಿಯ ಹೆಸರಿನಲ್ಲಿ

ಸುದ್ದಿಗೋಷ್ಠಿಯಲ್ಲಿ ರಿಯಾಜ್ ಅಹಮದ್

ಅಧ್ಯಕ್ಷ ಸುಬ್ರಮಣ್ಯ ಬಿನ್ ಗೋವಿಂದಪ್ಪ ಮತ್ತು ಉಪಾಧ್ಯಕ್ಷ ಆರ್ ಉಮೇಶ್ ರವರು ಸರ್ಕಾರಕ್ಕೆ ಸರ್ಕಾರಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಲ್ಯಾಂಡ್ ಗ್ರಾಬಿಂಗ್ ಮಾಡಿ ಮಾರಾಟ ಮಾಡುತ್ತಿರುವುವುದಾಗಿ ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಆರೋಪಿಸಿದೆ. 


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಶಿವಮೊಗ್ಗ ಪೀಸ್ ಆರ್ಗನೈಜೇಷನ್ ನ ರಿಯಾಜ್ ಅಹಮದ್ ಶಿವಮೊಗ್ಗದ ಅಗಸವಳ್ಳಿ ಗ್ರಾಮ ಸರ್ವೆ ನಂಬರ್ 167 ರಲ್ಲಿ 2033 ಎಕರೆ ಜಮೀನಿದ್ದು ಅದರಲ್ಲಿ 1144 ಎಕರೆ ಜಮೀನನ್ನು ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ಹಂಚಿಕೆ ಮಾಡಿದೆ.  ಅದರಲ್ಲಿ ಕೆಲವರು ವಾಸುಸುತ್ತಿದ್ದು ಇನ್ನು ಕೆಲವರು ಮಾರಾಟ ಮಾಡಿದ್ದಾರೆ.  ಇನ್ನು ಕೆಲವರು ಜಮೀನು ನಿವೇಶನ ಪಡೆಯದೆ ಇರುತ್ತಾರೆ. 

ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಸುಬ್ರಮಣಿ ಉಮೇಶ ಮತ್ತು ಇತರರು 60 70 ವರ್ಷಗಳಿಂದ ಬಗರ್ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿರುವಂತಹ ರೈತರ ಜಮೀನಿಗೆ ತಂತಿ ಬೇಲಿಯನ್ನು ಅಳವಡಿಸಿ ಜಾಗವನ್ನು ವಶಕ್ಕೆ ಪಡೆದುಕೊಂಡು ಸರ್ಕಾರಕ್ಕೆ ಸರ್ಕಾರದ ಅಧಿಕಾರಿಗಳಿಗೆ ಸುಳ್ಳು ಮಾಹಿತಿಯನ್ನು ನೀಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸುಳ್ಳು ಪ್ರಕರಣಗಳನ್ನು ಹಾಕಿಸಿ ಭೂಕಬಳಿಕೆ ಮಾಡಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. 

2 ಎಕರೆ 3 ಎಕರೆ ಮುಳುಗಡೆ ಸಂತ್ರಸ್ತರ  ದಾಖಲೆಗಳಿದ್ದರೆ 40 /50 ಎಕರೆ ಜಾಗಕ್ಕೆ ತಂತಿ ಬೇಲಿ ಅಳವಡಿಸಿರುತ್ತಾರೆ ಇವರು ಭೂಮಿಯನ್ನು ಅತಿಕ್ರಮ ತಂತಿ ಬೇಲಿ ಹಾಕುವ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳು ಇರುವುದಿಲ್ಲ ಸರ್ಕಾರ ಆರು ದಶಕಗಳಿಂದ ಭೂ ವಂಚಿತರಾಗಿ ಅರಣ್ಯ ಭೂಮಿಯಲ್ಲಿ ಸಾಗುವಳಿ‌ ಮಾಡಿಕೊಂಡು ಜೀವನ ಸಾಗಿಸುತ್ತಿರುವ  ಶರಾವತಿ, ವರಾಹಿ, ಚಕ್ರಾ, ಸಾವೇಹಕ್ಲುಮುಳುಗಡೆ ಸಂತ್ರಸ್ತರ ಮತ್ತು ಬಗರ್‌ ಹುಕುಂ ಸಾಗುವಳಿದಾರರಿಗಾಗಿ ಎಂದು ವಿಶೇಷ ಸಮಿತಿಯ ಸರ್ಕಾರ ವಿಶೇಷ ಜಿಲ್ಲಾಧಿಕಾರಿ ನೇಮಿಸಲು ಸಮ್ಮತಿ ನೀಡಿದೆ. 

ವಿಶೇಷ ಜಿಲ್ಲಾಧಿಕಾರಿ.ಸಹಾಯಕ ಅರಣ್ಯಾಧಿಕಾರಿ, ಏಳು ಜನ ಸರ್ವೆಯರ್‌ಗಳು, ದ್ವಿತೀಯ ದರ್ಜೆ ಸಹಾಯಕರು ಸಮಿತಿಯಲ್ಲಿ ಇರುತ್ತಾರೆ ಸಮಿತಿ ಇಲ್ಲದೆ ಇರುವುದರಿಂದ ಸುಬ್ರಮಣಿ ಉಮೇಶ ಮತ್ತು ಇತರರು ಬಗರ್‌ ಹುಕುಂ ಸಾಗುಲಿದಾರರ ಭೂಮಿಯನ್ನು ಕಿತ್ತುಕೊಳ್ಳಲು ಇವರದೇ ಸಮಿತಿಯನ್ನು ಮಾಡಿಕೊಂಡಿರುತ್ತಾರೆ.

ಅದರಿಂದ ತಾವುಗಳು ತಕ್ಷಣವೇ ಈ ವಿಚಾರವಾಗಿ ಸೂಕ್ಷ್ಮವಾಗಿ ಸೂಕ್ತವಾಗಿ ಪರಿಶೀಲಿಸಿ ವಿಶೇಷ ನ್ಯಾಯಾಧೀಶರನ್ನು ನೇಮಕ ಮಾಡಿ ಭೂಮಿಯಲ್ಲಿ ಸಾಗುವಳಿ‌ ಮಾಡಿಕೊಂಡು ಜೀವನ ಸಾಗಿಸುತ್ತಿರುವ  ಶರಾವತಿ, ವರಾಹಿ, ಚಕ್ರಾ, ಸಾವೇಹಕ್ಲುಮುಳುಗಡೆ ಸಂತ್ರಸ್ತರ ಮತ್ತು ಬಗರ್‌ ಹುಕುಂ ಸಾಗುವಳಿದಾರರಿಗಾಗಿ ನ್ಯಾಯ ದೊರಕಿಸಿ ಕೊಡಬೇಕಾಗಿ ರಿಯಾಜ್ ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ-https://www.suddilive.in/2024/07/blog-post_415.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close