ಸಂಸದರನ್ನ ಪ್ರಶ್ನಿಸಿದ ಮಲೆನಾಡು ವನ್ಯಜೀವಿ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ



ಸುದ್ದಿಲೈವ್/ಶಿವಮೊಗ್ಗ


ಮಲೆನಾಡು ವನ್ಯಜೀವಿ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಕೇರಳದ  ವಯನಾಡಿನಲ್ಲಿ ಸಂಭವಿಸುದ ಲ್ಯಾಂಡ್ ಸ್ಲೈಡಿಂಗ್ ನಿಂದ ಶಿವಮೊಗ್ಗದ ಸಂಸದರಿಗೆ ಹಾಗೂ ಈ ಭಾಗದ ಜನಪ್ರತಿನಿಧಿಗಳಿಗೆ ಒಂದಿಷ್ಟು ಪ್ರಶ್ನೆಯ ಮೂಲಕ ಎಚ್ಚರಿಕೆಯನ್ನ ನೀಡಲು ಮುಂದಾಗಿದ್ದಾರೆ. 


ವಯನಾಡಿನ ದುರಂತವನ್ನು ನೋಡಿದ ಮೇಲೆ ಶಿವಮೊಗ್ಗ ಸಂಸದರು ಆಗುಂಬೆಯ ಸುರಂಗ ಮಾರ್ಗ, ತೀರ್ಥಹಳ್ಳಿ ಶಿವಮೊಗ್ಗ ಚತುಷ್ಪತ ಹೆದ್ದಾರಿ, ತಾಳಗುಪ್ಪ ಹಾಗೂ ಉತ್ತರ ಕನ್ನಡ ರೈಲ್ವೆ ಮಾರ್ಗ, ಹಾಗೂ ಮೂಕಾಂಬಿಕಾ ಅಭಯಾರಣ್ಯ ದಲ್ಲಿ ಸಾಗುವ ಹೆದ್ದಾರಿ, ಇತರೆ ಯೋಜನೆಗಳನ್ನು ಕೈಬಿಡುತ್ತಾರಾ ಅಥವಾ ಜನರ ಜೀವವನ್ನು ಪಣಕ್ಕೆ ಇಟ್ಟು ಮುಂದುವರಿಸುತ್ತಾರಾ ಎಂದು ಪ್ರತಿಷ್ಠಾನ ಪ್ರಶ್ನಿಸಿದೆ.  


ಸಂಸದರಿಗೆ ಹಾಗೂ ಪಶ್ಚಿಮಘಟ್ಟದ ಜನಪ್ರತಿಗಳಿಗೆ ಮರಗಳನ್ನ ಕಡಿದು ಅಭಿವೃದ್ಧಿ ಮಾಡುವ ಅಥವಾ ಅಭಿವೃದ್ಧಿಗಾಗಿ ಪಶ್ಚಿಮಘಟ್ಟವನ್ನ ಅಪಾಯಕ್ಕೆ ತಳ್ಳುವ ಕಾಮಗಾರಿಗಳು ಅವಶ್ಯಕತೆ ಇದೆಯಾ? ಎಂದು ಪ್ರತಿಷ್ಠಾನ ಪ್ರಶ್ನಿಸಿದೆ. 

ಇದನ್ನೂ ಓದಿ-https://www.suddilive.in/2024/07/blog-post_990.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close