ಸುದ್ದಿಲೈವ್/ಶಿವಮೊಗ್ಗ
ಕಾಡು ಬಿಟ್ಟು ಚಿರತೆ ನಾಡಿಗೆ ಬಂದು ಬಿಡ್ತಾ ಎಂಬ ಅನುಮಾನಕ್ಕೆ ಈ ಸಿಸಿ ಟಿವಿ ಫುಟೇಜ್ ಎಡೆಮಾಡಿಕೊಟ್ಟಿದೆ. ಸರ್ಜಿ ಕನ್ವೆಷನಲ್ ಹಾಲ್ ಬಳಿ ಚಿರತೆ ಕಂಡು ಬಂದಿದೆ ಎಂದು ವಾಟ್ಸಪ್ ಗಳಲ್ಲಿ ವಿಡಿಯೋವೊಂದು ವೈರಲ್ ಮಾಡಲಾಗುತ್ತಿದೆ.
ಶಿವಮೊಗ್ಗ ನಗರದ ಸರ್ಜಿ ಕನ್ವೇಷನ್ ಹಾಲ್ ಎದುರುಗಡೆಯ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಭಯಭೀತಿಯಾಗಿರುವುದಾಗಿ ಚರ್ಚೆ ನಡೆಯುತ್ತಿದೆ.
ಕುವೆಂಪು ನಗರದ ಕೆಲ ಭಾಗಗಳಲ್ಲಿ , ಚಿರತೆ ಕಾಣಿಸಿಕೊಂಡಿದ್ದು, ಇದು ಒಂದು ಮನೆಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿರುವ ದೃಶ್ಯವಾಗಿದ್ದು. ಅರಣ್ಯ ಇಲಾಖೆ ಈ ಬಗ್ಗೆ ಏನು ಸ್ಪಷ್ಟನೆ ಕೊಡಲಿದೆ ಕಾದು ನೋಡಬೇಕಿದೆ.
Tags:
ಕ್ರೈಂ ನ್ಯೂಸ್