ಶಿವಮೊಗ್ಗ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಕೆಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮತ್ತೊಂದು ಕಳುವು ಪ್ರಕರಣ ದಾಖಲಾಗಿದೆ.‌  ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಭದ್ರಾವತಿ ಬಸ್ ಹತ್ತಿದ ವೇಳೆ ಈ ಘಟನೆ ನಡೆದಿದೆ.

ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಮಹಿಳೆ ತಾಯಿ ಮತ್ತು  ತನ್ನ‌ ಮಗಳ ಜೊತೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ  ಕುಂಕುವ ಗ್ರಾಮದದಲ್ಲಿ ಮದುವೆ ಮುಗಿಸಿಕೊಂಡು ವಾಪಾಸ್ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.

ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆ ಹೋಗುವ ಬಸ್ ಹತ್ತಿದ್ದು ಈ ವೇಳೆ ಬಸ್ ರಶ್ ಆಗಿತ್ತು. ಮೊಮ್ಮಗಳು ಮತ್ತು ಮಹಿಳೆ ಬಸ್ ಹತ್ತಿಕೊಂಡು ಕುಳಿತು ಬೈಪಾಸ್ ಹತ್ತಿರ ಬಸ್ ಹೋಗುವಾಗ ಆಧಾರ್ ಕಾರ್ಡ್ ತೆಗೆಯಲು ವ್ಯಾನಿಟಿ‌ಬ್ಯಾಗ್ ನೋಡಿದಾಗ ಜಿಪ್ ಓಪನ್ ಆಗಿತ್ತು.

ಗಾಬರಿಗೊಂಡು ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ 15 ಗ್ರಾಮ್ ನ ಬಂಗಾರದ ನೆಕ್ಲೆಸ್ ಕಳುವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬೈಪಾಸ್ ನಲ್ಲಿ ಇಳಿದ ಮಹಿಳೆ ಬಸ್ ನಿಲ್ದಾಣಕ್ಕೆ ಬಂದು ಹುಡುಕಿದ್ದಾರೆ. ಎಲ್ಲೂ ಸಿಕ್ಕಿರಲಿಲ್ಲ.

ತನ್ನ ತಾಯಿ ಮದುವೆಗೆ ಉಡುಗೊರೆಯಾಗಿ  ನೀಡಿದ್ದ  ನೆಕ್ಲೆಸ್ ಅದಾಗಿದ್ದು, ಬಸ್ ಹತ್ತುವಾಗ ಕಳ್ಳರ ಕೈಚಳಕದಿಂದ ಒಡವೆಯನ್ನ ಕಳೆದುಕೊಳ್ಳುವಂತಾಗಿದೆ. ಇಲ್ಲಿದೆ ಈ ವರ್ಷದ  ಸುಮಾರು 8 ನೇ ಕಳುವಿನ ಪ್ರಕರಣವಾಗಿದೆ.

ಇದನ್ನೂ ಓದಿ-https://suddilive.in/archives/18356

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close