ಲಿಂಗನಮಕ್ಕಿ |
ಸುದ್ದಿಲೈವ್/ಶಿವಮೊಗ್ಗ
ಹೊಸನಗರ, ಸಾಗರದಲ್ಲಿ ಮಳೆ ಚುರುಕುಗೊಂಡ ಬೆನ್ನಲ್ಲೇ ಲಿಂಗನಮಕ್ಕಿ ಜಲಾಶಯದ ಒಳಹರಿವು 96 ಸಾವಿರ ಕ್ಯೂಸೆಕ್ ಗೆ ತಲುಪಿದೆ.
ಪರಿಣಾಮ ಇಂದು ಬೆಳಿಗ್ಗೆ 1810.5 ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ಜಲಾಶಯಕ್ಕೆ ಮಧ್ಯಾಹ್ನವೇ 1811.25 ಅಡಿ ನೀರು ಏರಿಕೆಯಾಗಿದೆ. ನಾಳೆ ಬೆಳಿಗ್ಗೆ ಮೂರನೇ ಹಾಗೂ ಅಂತಿಮ ನೋಟೀಸ್ ಹೊರಬೀಳುವ ಸಾಧ್ಯತೆಯಿದೆ.
ಲಿಂಗನಮಕ್ಕಿಯಲ್ಲಿ 1800 ಅಡಿ ನೀರು ತುಂಬಿದಾಗ ಮೊದಲ ಅಲರ್ಟ್ ನೀಡಿದ ಕರ್ನಾಟಕ ವಿದ್ಯುತ್ ನಿಗಮ 1807 ಅಡಿ ತುಂಬಿದಾಗ ಎರಡನೇ ಅಲರ್ಟ್ ಹೊರಬಿದ್ದಿತ್ತು. 1812 ಅಡಿ ತಲುಪಿದರೆ ಮೂರನೇ ನೋಟೀಸ್ ನೀಡಲಾಗುತ್ತದೆ. ಯಾವುದೇ ಕ್ಷಣದಲ್ಲಾದರೂ 1812 ಅಡಿ ನೀರು ಭರ್ತಿಯಾಗುವ ಸಾಧ್ಯತೆ ಇರುವುದರಿಂದ ಮೂರನೇ ಅಲರ್ಟ್ ನೋಟೀಸ್ ನ್ನ ನಾಳೆ ನೀಡುವ ಸಾಧ್ಯತೆ ಇದೆ.
1819 ಅಡಿ ಸಾಮರ್ಥ್ಯದ ಈ ಜಲಾಶಯ ಈ ಬಾರಿಯ ಮಳೆಯ ಆರ್ಭಟಕ್ಕೆ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಇಂದು ಸಭೆ ಸೇರಿದ ಅಧಿಕಾರಿಗಳು ಆ.1 ಕ್ಕೆ ಜಲಾಶಯದಿಂದ ನೀರು ಹರಿಸುವ ಬಗ್ಗೆ ಚರ್ಚಿಸುತ್ತಿದ್ದಾರೆ.
ತುಂಗ ನದಿಯ ತೀರದ ನಿವಾಸಿಗಳಿಗೆ ಢವಢವ
ಮಧ್ಯಾಹ್ನ3 ಗಂಟೆಗೆ 73 ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ತುಂಗೆಯಲ್ಲಿ ಸಂಜೆಯ ವೇಳೆಗೆ 80 ಸಾವಿರ ಕ್ಯೂಸೆಕ್ ನೀರು ತಲುಪಿದೆ. ನಾಲ್ಕೈದು ದಿನಗಳ ಹಿಂದೆ ಸೀಗೆಹಟ್ಟಿ, ಇಮಾಮ್ ಬಾಡ, ಕುಂಬಾರಗುಂಡಿಯಲ್ಲಿ ನೀರು ನುಗ್ಗುವ ಭಯದಲ್ಲಿ ಜನರಿದ್ದಾರೆ, ಹಳೇ ಮಂಡ್ಲಿಯ ತೀರ್ಥಹಳ್ಳಿಯ ರಸ್ತೆಯ ಮೇಲೆ ನದಿಯ ನೀರು ಹರಿದಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ-https://www.suddilive.in/2024/07/blog-post_863.html