8 ಸೆಕೆಂಡ್ ಗಳಷ್ಟು ಲಿಂಗನಮಕ್ಕಿಯ ಜಲಾಶಯದ ಗೇಟ್ ಓಪನ್!

ಪೂಜೆಗಾಗಿ ಲಿಂಗನಮಕ್ಕಿಯ ಜಲಾಶಯದಿಂದ ನದಿಗೆ ನೀರು

ಸುದ್ದಿಲೈವ್/ಸಾಗರ


ಲಿಂಗನಮಕ್ಕಿ ಜಲಾಶಯದ ಒಂದು ಗೇಟನ್ನ ಮೇಲಕ್ಕೆ ಎತ್ತಿ ನದಿಗೆ ನೀರು ಹರಿಸಲಾಗಿದೆ.‌ ಹೋಲ್ಡ್ ಆನ್....! ಹಾಗಂತ ಜಲಾಶಯ ಭರ್ತಿಯಾದ ಬೆನ್ನಲ್ಲೇ ನೀರು ಹರಿಸಲಾಯಿತು ಎಂದರೆ ತಪ್ಪಾಗಲಿದೆ. ಕಾರಣ ಇನ್ನೂ 15 ಅಡಿ ನೀರು ಸಂಗ್ರಹವಾಗಬೇಕು. ಇನ್ಮುಂದೆ ಜಲಾಶಯಕ್ಕೆ ನೀರು ತುಂಬುವುದೇ ಕುತೂಹಲ ವಿಷಯವಾಗಲಿದೆ. 


ಹಾಗದರೆ ನೀರು ಬಿಟ್ಟಿದ್ದೇಕೆ? ಎಂದರೆ, 1800 ಅಡಿ ತುಂಬಿದ ಕಾರಣ ಜಲಾಶಯಕ್ಕೆ ಪೂಜೆ ಸಲ್ಲಿಸಲಾಗುತ್ತದೆ.  ಈ ಸಂಬಂಧ ಅಧಿಕಾರಿಗಳು ಒಂದು ಗೇಟನ್ನ  ಒಂದಿಂಚು ಮೇಲಕ್ಕೆ ಎತ್ತರಿಸಿ ಎಂಟು ಸೆಕೆಂಡ್ ಗಳ ಕಾಲ ನೀರು ಹರಿಸಿದ್ದಾರೆ. ನಂತರ ಪುನಃ ಬಂದ್ ಮಾಡಿದ್ದಾರೆ.  ಪೂಜೆಯ ಅಂಗವಾಗಿ ಈ ಕಾರ್ಯ ನಡೆದಿದೆ. 


ಶರಾವತಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ದಾಖಲೆ ಪ್ರಮಾಣದಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವಿದ್ದು, ಸಾಗರದ ಲಿಂಗನಮಕ್ಕಿಯಲ್ಲಿರುವ ರಾಜ್ಯದ ಪ್ರಮುಖ ಜಲಾಶಯಗಳಲ್ಲೊಂದಾಗಿದೆ. 


ಸುಮಾರು 65  ಕ್ಯೂಸೆಕ್ ನೀರು ಒಳಹರಿವಿದೆ. ಒಟ್ಟು 1819 ಅಡಿ ಎತ್ತರ ಜಲಾಶಯ, ಶುಕ್ರವಾರಕ್ಕೆ 1805 ಅಡಿ ನೀರು ಸಘ್ರಹವಾಗಿದೆ. 71.5% ತುಂಬಿರುವ ಜಲಾಶಯ, ಒಂದೇ ತಿಂಗಳಲ್ಲಿ 70 TMC ನೀರು ಹರಿದು ಬಂದಿದೆ. ಜಲಾಶಯ ಮಟ್ಟ ನಿರೀಕ್ಷೆಗೂ ಮೀರಿ ತುಂಬಿದೆ. 



ಸಾಂಪ್ರದಾಯಿಕವಾಗಿ ಅಧಿಕಾರಿಗಳಿಂದ ಮೊಲದ ಪೂಜೆ ನಡೆದಿದೆ. ಪ್ಲಾಂಟ್, ಹಾಗೂ ಡ್ಯಾಂ ಎಂಜಿನೀಯರ್ ಗಳಿಂದ ಬಾಗೀನ ಸಮರ್ಪಣೆಯ ಅಂಗವಾಗಿ ಜಲಾಶಯಕ್ಕೆ ಪೂಜೆ ಸಲ್ಲಿಸಲಾಗಿದೆ. ಗೇಟ್ ಟೆಸ್ಟ್ ಮಾಡುವ ಸಲುವಾಗಿಯೂ ಈ ಪೂಜೆ ಮಹತ್ವದಾಗಿದೆ.‌


ಇತ್ತ ಸೋಷಿಯಲ್ ಮೀಡಿಯಾದಲ್ಲಿ ಆನ್ ಲೈನ್ ಮಾಧ್ಯಮವೊಂದು ಲಿಂಗನಮಕ್ಕಿಯಿಂದ ಯಾವುದೇ ಕ್ಷಣದಲ್ಲಾದರೂ ನೀರು ಬಿಡುವ ಸಾಧ್ಯತೆ ಎಂದು ಜಲಾಶಯದ ಗೇಟ್ ನಿಂದ ನೀರು ಹರಿಸುತ್ತಿರುವ ಫೊಟೊವೊಂದು ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರೂ ಈ ಜಲಾಶಯದ ನೀರು ತುಂಬಲು ಕನಿಷ್ಟ 20 ದಿನ ಬೇಕು ಅದೂ ನಿರಂತರ ಮಳೆಯಾದರೆ ಮಾತ್ರ ಎಂದು ಹಿಗ್ಗಾಮುಗ್ಗಾ ಬೈದು ಟ್ರೋಲ್ ಮಾಡಲಾಗುತ್ತಿದೆ.


ಇದನ್ನೂ ಓದಿ-https://www.suddilive.in/2024/07/blog-post_256.html



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು