ತಡೆಗೋಡೆ ನಿರ್ಮಾಣಕ್ಕೆ ಕ್ರಿಯಾಯೋಜನೆ-7 ದಿನ ಗಡುವು-ಸಚಿವ ಮಧು ಬಂಗಾರಪ್ಪ

 

ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ


ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ 500 ಮಿಮಿ ಹೆಚ್ಚಾಗಿದೆ. ಇಂದು ಗಾಜನೂರಿಗೆ ಭೇಟಿ ನೀಡಿ ಜಲಾಶಯಕ್ಕೆ ಬಾಗಿನ ಅರ್ಪಿಸಲಾಯಿತು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಕಡಿಮೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಮಧು ಬಂಗಾರಪ್ಪ ಅವರಿಗೆ ಟೀಕಿಸೊಲ್ಲ. ಆದರೆ ಪ್ರಕೃತಿ ಹೇಗೆ ಪಡೆದುಕೊಳ್ಳುತ್ತದೆ ಅಂತ ಯಾರಿಗೆ ಗೊತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ಅತಿವೃಷ್ಠಿ ಎಂಬ ಹಣೆಪಟ್ಟಿ ಕಟ್ಟಬಹುದಾ ಎಂದು ಪ್ರಶ್ನಿಸಿದರು.


ಶರಾವತಿ ಹಿನ್ನೀರಿನಿಂದ ಸೊರಬಕ್ಕೂ ಕುಡಿಯುವ ನೀರು ಒದಗಿಸಲು ಯೋಚಿಸಲಾಗಿದೆ. ನೀರಿನ ವ್ಯವಸ್ಥೆಯನ್ನ ಕುಡಿಯಲು ಮತ್ತು ಕೃಷಿಗೆ ಬಳಕೆ ಮಾಡಿಕೊಳ್ಳುವ ಬಗ್ಗೆ ಯೋಚಿಸಲಾಗಿದೆ. ತುಂಗ ಅಣೆಕಟ್ಟು ಏರಿಸುವ ಕುರಿತು ಚಿಂತಿಸಲಾಗುವುದು ಎಂದು ಹೇಳಿ ಬೇರೆ ವಿಷಯ ಪ್ರಸ್ತಾಪಿಸಿದರು.


ತುಂಗ ನದಿಗೆ ಹರಕೆರೆಯಿಂದ ಸವಾಯಿಪಾಳ್ಯದ ವರೆಗೆ ತಡೆಗೋಡೆ ತರಲಾಗುವುದು. ಪರಿಹಾರ ನೀಡಲು ಸರ್ಕಾರ ಯೋಚಿಸಿದೆ. ಅನಧಿಕೃತ ಮನೆಗಳಿಗೆ ಎಸ್ಡಿ ಆರ್ ಎಲ್ ನಲ್ಲಿ ಪರಿಹಾರ ನೀಡಲು ಯೋಚಿಸಲಾಗುತ್ತಿದೆ. ಬೆಳೆ ಹಾನಿಯ ಪರಿಹಾರವನ್ನ ರೈತರು ಪಡೆಯಬೇಕು ಎಂದು ಹೇಳಿದರು.


ಪ್ರಾಣ ಹಾನಿ ಮತ್ತು ಜಾನುವಾರುಗಳ ಪ್ರಾಣ ಹಾನಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಮಳೆಗೆ ಅನೇಕ ಅನಾಹುತವಾಗಿದೆ. ಅರಣ್ಯ ಭೂಮಿಗಾಗಿ ಈ ಹಿಂದೆ ಮಳೆನಾಡಿನ ಜನಾಕ್ರೋಶದ ಹೋರಾಟ ಮಾಡಲಾಗಿತ್ತು. ಭೂಮಿ ಕಳೆದುಕೊಂಡವರಿಗೆ ನ್ಯಾಯಕೊಡಿಸಲು ಪರಿಹಾರ ಹುಡುಕಲಾಗಿದೆ.


ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಮನವಿ ನೀಡಲಾಗಿತ್ತು. ದೇವದಾಸ್ ಕಾಮತ್ ಸೇರಿದಂತೆ ಇನ್ನಿಬ್ಬರನ್ನ ಸುಪ್ರೀಂನಲ್ಲಿ ಫೈಟ್ ಮಾಡಲು ನೇಮಿಸಲಾಗಿದೆ ಚಕ್ರ, ಸಾವೇಹಕ್ಲು, ಶರಾವತಿ ಸೇರಿದಂತೆ ಜಿಲ್ಲೆಯ ಹಲವು ಅರಣ್ಯ ಭೂಮಿಯ ವಿಷಯಗಳನ್ನ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.


ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಸರ್ಕಾರ ನಡೆಸುವ ವಿಷಯದಲ್ಲಿ ವಿಪಕ್ಷಗಳು ನರಿಯಾಗಿ ನಡೆದುಕೊಳ್ಳಬೇಕು. ಪ್ರತಿ ಬಾರಿ ವಿಧಾನ ಸಭೆಯ ಬಾವಿಗೆ ಇಳಿದು ವಿಪಕ್ಷಗಳು ಪ್ರತಿಭಟನೆ ನಡೆಸುವುದು ಸರಿಯಲ್ಲ. ಪಾದಯಾತ್ರೆ ಮಾಡಲು ವಿಪಕ್ಷಗಳು ಹೊರಟಿವೆ. ಅವರ ಪಕ್ಷದ ಯತ್ನಾಳ್ ಮತ್ತು ಅರವಿಂದ ಲಿಂಬಾವಳಿಯ ಹೇಳಕೆಗೆ ಉತ್ತರಿಸಲಿ ಎಂದರು.


ಬಿಜೆಪಿ ಅರಣ್ಯ ಭೂಮಿಯ ಬಗ್ಗೆ ಕೇಂದ್ರ ಹೆಚ್ಚು ಆಸಕ್ತಿ ತೆಗೆದುಕೊಳ್ಳಬೇಕು ಎಂದ ಅವರು ಕುರುಬರ ಪಾಳ್ಯದ ಬಳಿ 43 ಲಕ್ಷ ಬಿಡುಗಡೆಯಾಗಿದೆ.  ಪಾಲಿಕೆವತಿಯಿಂದ 500 ಮೀಟರ್ ಉದ್ದದ ತಡೆಗೋಡೆ ನಿರ್ಮಿಸಲಾಗುವುದು. ತುಂಗನದಿಗೆ ತಡೆಗೋಡೆಗೆ ಹೆಚ್ಚಿನ ಕ್ರಿಯಾಯೋಜನೆಗೆ 7 ದಿನಗಳ ಒಳಗೆ ಪ್ರಸ್ತಾಪನೆ ಕಳುಹಿಸಲು ಪಾಲಿಕೆಗೆ ಸೂಚಿಸಲಾಗಿದೆ ಎಂದರು.


ಗಾಜನೂರಿನಲ್ಲಿ ಹೂಳೆತ್ತಲು ಅಧಿಕಾರಿಗಳು ಸಾಧ್ಯವಿಲ್ಲ  ಎಂದಿದ್ದಾರೆ. 97 ಕೆರೆಗಳು ಜಿಲ್ಲೆಯಲ್ಲಿ ಹಾಳಾಗಿವೆ. ಮುಂದಿನ ದಿನಗಳಲ್ಲಿ ಕೆರೆಗಳಿಗೆ ನದಿ ನೀರು ಉಣಿಸಲಾಗವುದು.  ಕೆಲ ಸೇತುವೆಗಳು ಸಮಸ್ಯೆಯಾಗಿದೆ ಪ್ರಾಮುಖ್ಯತೆಯ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ತುಂಗ ನದಿಗೆ ಎಲ್ಲಿ ಅವಶ್ಯಕತೆ ಇದೆ ಅಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುವುದು ಎಂದರು.


ಅಸೆಂಬ್ಲಿಯಾದ ನಂತರ ಜಿಲ್ಲೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬರಲಿದ್ದಾರೆ. ಸಂಪೂರ್ಣ ಮನೆ ಬಿದ್ದವರಿಗೆ 5 ಸಾವಿರ ರೂ. ಕೊಡುವುದನ್ನ ಏರಿಸಲಾಗುವುದು. ಎನ್ ಡಿಆರ್ ಎಫ್ ಗೆ 1.2 ಅಧಿಕೃತ ಮನೆಗಳಿಗೆ ಪರಿಹಾರ ನಿಡಲಾಗುತ್ತದೆ. ಅನಧಿಕೃತ ಮನೆ ಬಿದ್ದು ಹೋದರೆ ಅವರ ಸಂರಕ್ಷಣೆ ಮಾಡಲು ಕ್ರಮ ಜರುಗಿಸಲಾಗುವುದು. ಅವರಿಗೆ ಬದಲಿ ಮನೆ ಕೊಡಿಸುವ ಬಗ್ಗೆ ಪಾಲಿಕೆ ಯೋಚಿಸಲಿದೆ ಎಂದರು.

ಇದನ್ನೂ ಓದಿ-https://www.suddilive.in/2024/07/blog-post_185.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close