ಲಿಂಗನಮಕ್ಕಿ ನದಿ ಪಾತ್ರದ ಜನಕ್ಕೆ ಎಚ್ಚರಿಕೆ


ಸುದ್ದಿಲೈವ್/ಕಾರ್ಗಲ್ (ಜೋಗ)


ಲಿಂಗನಮಕ್ಕಿಯ ಒಳಹರಿವು ಹೆಚ್ಚಳ ಮತ್ತು ಹವಮಾನ ಇಲಾಖೆಯ ಮೂರುದಿನ ರೆಡ್ ಅಲರ್ಟ್ ಘೋಷಣೆಯ ಹಿನ್ನಲೆಯಲ್ಲಿ ಲಿಂಗನಮಕ್ಕಿಯಿಂದ ನದಿಪಾತ್ರದ ಜನರಿಗೆ ವಾಹನದ ಅನೌನ್ಸ್ ಮೆಂಟ್ ಮಾಡಲಾಗುತ್ತಿದೆ


ಇಂದು ಸಂಜೆ 6.00 ಗಂಟೆಗೆ ಲಿಂಗನಮಕ್ಕಿ ಅಣೆಕಟ್ಟಿನ ಮಟ್ಟವು 1811.50 ಅಡಿಗಳನ್ನು ತಲುಪಿದ್ದು, ಪ್ರಸ್ತುತ ಒಳಹರಿವು 92000 ಕ್ಯೂಸೆಕ್ಸ್‌ ಗಳಾಗಿರುತ್ತದೆ.  IMD ಮುನ್ಸೂಚನೆಯಂತೆ ಇನ್ನೂ 3 ದಿನಗಳ ವರೆಗೆ ರೆಡ್‌ಅಲರ್ಟ್‌ ನೀಡಲಾಗಿದ್ದು  ಪ್ರತಿ ದಿನಕ್ಕೆ ಸುಮಾರು 80000 ದಿಂದ 90000 ಕ್ಯೂಸೆಕ್ಸ್‌ ಒಳಹರಿವು ಬರುವ ಸಾಧ್ಯತೆ ಇರುತ್ತದೆ. ಈ ಪರಿಸ್ಥಿತಿಯು ಮುಂದುವರೆದಲ್ಲಿ, ಅಣೆಕಟ್ಟು ಮಟ್ಟವು ದಿನಾಂಕ 31.07.2024 ಸಮಯ 9.00 ಗಂಟೆಗೆ 1814 ಅಡಿಗಳನ್ನು ತಲುಪಲಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ ಪ್ರಕಟಣೆ ಹೊರಡಿಸಿದೆ. 



ಈ ನಿಟ್ಟಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ರೇಡಿಯಲ್‌ ಗೇಟ್‌ಗಳ ಮೂಲಕ ಕಾರ್ಯಾಚರಣೆ ವಿಧಾನದಂತೆ ದಿನಾಂಕ 01.08.2024 ರ ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭಿಕವಾಗಿ 10000 ಕ್ಯೂಸೆಕ್ಸ್‌ಗಳೊಂದಿಗೆ ನೀರನ್ನು ಹೊರಬಿಡಲು ಯೋಜಿಸಲಾಗಿದೆ. ಹಾಗೆಯೇ ಒಳಹರಿವಿನ ಆಧಾರದ ಮೇಲೆ ನೀರಿನ ಬಿಡುಗಡೆಯ ಪ್ರಮಾಣವನ್ನು ಹೆಚ್ಚಿಸಲಾಗುವುದು. ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಸಾರ್ವಜನಿಕರಿಗೆ ಪ್ರವಾಹ ಎಚ್ಚರಿಕೆ ಪ್ರಕಟಣೆಯನ್ನು  ಕೆಪಿಸಿಎಲ್‌ ಮಾಡುತ್ತಿದೆ.


ಇದನ್ನೂ ಓದಿ-https://www.suddilive.in/2024/07/blog-post_696.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close