ಸುದ್ದಿಲೈವ್/ಶಿವಮೊಗ್ಗ
ಸಾಗರ ತಾಲೂಕಿನ ಮಾವಿನಹೊಳೆ ಮತ್ತು ವರದ ನದಿಗಳು ಭರ್ತಿಯಾದ ಬೆನ್ನಲ್ಲೇ ಶುಂಠಿಕೊಪ್ಪದ ಬಳಿ ತಟ್ಟೆಗುಂಡಿ, ತಡಗಳಲೆ-ಬೀಸನಗದ್ದೆ ಜಲಾವೃತವಾಗಿದೆ.
ಸಾವಿರಾರು ಎಕರೆ ನೀರಿನಲ್ಲಿ ಮುಳಡೆಯಾಗಿದೆ. ನೆಟ್ಟಿ ಹಾಳಾಗಿದೆ ಅಲ್ಲದೆ ಗ್ರಾಮದಿಂದ ಗ್ರಾಮಕ್ಕೆ ಪ್ರಯಾಣಿಸಲು ರಸ್ತೆಗಳ ಸಂಪರ್ಕ ಮುರಿದು ಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಟ್ಟೆಗುಂಡಿಯ ಬಳಿ ರಸ್ತೆಯನ್ನ ಏರಿಸುವಂತೆ ಮತ್ತೆ ತಡೆ ಗೋಡೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ. ತಟ್ಟೆಗುಂಡಿಯ ರಸ್ತೆ ಏರಿಸದರೂ ನದಿಗಳು ಈ ಬಾರಿ ಜಲಾವೃತಗೊಂಡಿದೆ. ಈ ಸ್ಥಳಕ್ಕೆ ಸಚಿವ ಮಧು ಬಂಗಾರಪ್ಪನವರು ಜಿಲ್ಲಾಧಿಕಾರಿ ಗುರದತ್ತಹೆಗಡೆ ಮತ್ತುಸಾಗರಷದ ಎಸಿ ಜೊತೆ ವಿಸಿಟ್ ಮಾಡಿದ್ದಾರೆ.
ಈ ವೇಳೆ ಅಧಿಕಾರಿಗಳು ಎರಡೂ ಹೊಳೆಗಳು ಸೇರಿ ವರದ ಮೂಲದಿಂದ ಸೊರಬದ ವರೆಗೆ ಬ್ಯಾರೆಜ್ ನಿರ್ಮುಸಲು ಸೂಚಿಸಿದ್ದಾರೆ. 6 ಕಡೆ ಬ್ಯಾರೇಜ್ ನಿರ್ಮಿಸಲು ಸೂಚಿಸಿದ್ದಾರೆ.
6 ಬ್ಯಾರೇಜ್ ನಿರ್ಮಿಸುವ ಮೂಲಕ ಕೃಷಿ ಬಳಕೆ ಮತ್ತು ಮಳೆಗಾಲದಲ್ಲಿ ಜಲಾವೃತವನ್ನ ತಗ್ಗಿಸಬಹುದಾಗಿದೆ. ಅಲ್ಲದೆ ವರ್ಷದಲ್ಲಿ ಎರಡುಬೆಳೆ ತೆಗೆಯಲು ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಜೊತೆಗರ ಜಮೀನಿಗೆ ಹಾಳಾಗಿರುವ ಎಂಬ್ಯಾಕ್ ಮೆಂಟ್ ಸರಿಪಡಿಸಲು ಸಂಬಂದಪಟ್ಟ ಇಂಜಿನಿಯರ್ ಗೆ ಸೂಚಿಸಿದರು.
ನಂತರ ಹಿರೇನಲ್ಲೂರಿನಲ್ಲಿ ಹಾಳದ ಪ್ರದೇಶಗಳಿಗೆ, ಸೈದೂರು ಕನ್ನೆಹೊಳೆ ಮತ್ತು, ಮಂಡಗಳಲೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು. ಮಂಡಗಳಲೆಯಲ್ಲಿ ಮಳೆಯಿಂದ ಮನೆ ಹಾನಿಗೊಳಗಾದ ಎರಡು ಕುಟುಂಬಗಳನ್ನ ಮಾತನಾಡಿಸಿದರು.
ಇದನ್ನೂ ಓದಿ-https://www.suddilive.in/2024/07/blog-post_713.html