ಸುದ್ದಿಲೈವ್/ರಿಪ್ಪನ್ ಪೇಟೆ, ಜು.20
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು 50 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದ ಘಟನೆ ಕೋಡೂರು ಸಮೀಪದ ಸುರುಳಿಕೊಪ್ಪ ಬಳಿಯಲ್ಲಿ ನಡೆದಿದೆ.
ರಿಪ್ಪನ್‌ಪೇಟೆ ಕಡೆಯಿಂದ ಹೊಸನಗರಕ್ಕೆ ತೆರಳುತಿದ್ದ ಕಾರು ಸುರುಳಿಕೊಪ್ಪ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ , ಕಾರಿನಲ್ಲಿ ಹೊಸನಗರ ಸಮೀಪದ ಹೆಗ್ಗೆರಸು ಗ್ರಾಮದ ಇಬ್ಬರು ಪ್ರಯಾಣಿಸುತಿದ್ದರು.
ಘಟನೆಯಲ್ಲಿ ಚಾಲಕ ಗಿರೀಶ್ ಮತ್ತು ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ , ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ-https://www.suddilive.in/2024/07/blog-post_944.html