ಸುದ್ದಿಲೈವ್/ಹೊಳೆಹೊನ್ನೂರು
ಕಳೆದ 34 ವರ್ಷದ ಹಿಂದೆ ಅಂದರೆ 1990 ರಲ್ಲಿ ನೆರೆ ಜಿಲ್ಲೆ ಉಡುಪಿ ಜಿಲ್ಲಾ ನಗರ ಪೋಲಿಸ್ ಠಾಣೆ ಲಿಮಿಟ್ಸ್‌ನಲ್ಲಿ ಶ್ರೀಗಂಧ ಕಳ್ಳತನ ಮಾಡಿದ್ದ ಎಂಬ ಆರೋಪದ ಅಡಿಯಲ್ಲಿ ಪಟ್ಟಣದ ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್‌ನ ನಿವಾಸಿ ಚಿನ್ನವಾಡು (55) ಎಂಬಾತನನ್ನು ಹೊಳೆಹೊನ್ನೂರು ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ನೇತೃತ್ವದ ತಂಡ ಗುರುವಾರ ಬಂಧಿಸಿ ಉಡುಪಿ ನಗರ ಪೋಲೀಸರಿಗೆ ಒಪ್ಪಿಸಿದ್ದಾರೆ
ಸುಮಾರು 34 ವರ್ಷದ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇದೀಗ ಶಿವಮೊಗ್ಗದ ಹೊಳೆಹೊನ್ನೂರು ಮೂಲದ ಆರೋಪಿಯೊಬ್ಬನನ್ನ ಬಂಧಿಸಿದ್ದಾರೆ.
ಶ್ರೀಗಂಧ ಕಳ್ಳತನ ಪ್ರಕರಣ
ಬಂಧಿತ ಆರೋಪಿ 1990 ರಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ಲಿಮಿಟ್ಸ್‌ನಲ್ಲಿ ಶ್ರೀಗಂಧ ಕಳ್ಳತನ ನಡೆಸಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೇಸ್ ದಾಖಲಾಗಿ ಇದೀಗ 34 ವರ್ಷಗಳೇ ಕಳೆದಿದೆ. ಇದೀಗ ಪ್ರಕರಣದ ಆರೋಪಿಯನ್ನ ಹೊಳೆಹೊನ್ನೂರು ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ-https://www.suddilive.in/2024/07/blog-post_107.html