3 ಕೋಟಿ ವಂಚನೆ-ಪ್ರತಿಷ್ಠಿತ ಕಂಪನಿಯ ವಿರುದ್ಧ ಎಫ್ಐಆರ್


ಸುದ್ದಿಲೈವ್/ಶಿವಮೊಗ್ಗ


ಪ್ರತಿಷ್ಠಿತ ವಾಹನ ಸಂಸ್ಥೆಯೊಂದು ಶೋರೂಮ್ ವಿಚಾರದಲ್ಲಿ 3 ಕೋಟಿಯಷ್ಟು ನಂಬಿಕೆ ದ್ರೋಹ ಮಾಡಿ ನಷ್ಟವುಂಟು ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಪ್ರತಿಷ್ಠಿತ ಐಷರ್ ಕಂಪನಿಯನ್ನ ಸಾಗರದಲ್ಲಿ ಆರಂಭಿಸಲು ಶಿವಮೊಗ್ಗದ ಹೊಸಮನೆಯ ನಿವಾಸಿಯಾದ ಮಾವಳ್ಳಿ ದಾನಪ್ಪ ಬಸಪ್ಪ ಎಂಬುವರಿಗೆ ಕರೆ ಮಾಡಿ ಬುಲೆಟ್, ಬೈಕ್, ರಾಯಲ್ ಎನ್ ಫೀಲ್ಡ್ ಆರಂಭಿಸಲು ಮೌಖಿಕವಾಗಿ ತಿಳಿಸಿದ್ದಾರೆ. 


ಸಂಸ್ಥೆಯ ಮೇಲೆ ನಂಬಿಕೆಯಿಟ್ಟ ಬಸಪ್ಪನವರು 3 ಕೋಟಿ ವ್ಯಯದಲ್ಲಿ ಸಾಗರದಲ್ಲಿ ಶೋರೂಂ ಆರಂಭಿಸುತ್ತಾರೆ. ಆದರೆ ಸಂಸ್ಥೆಯು ಹೊಸ ಹೊಸ ನಿಯಮ ನಿಬಂಧನೆಗಳನ್ನ ಹಾಕಿ ಔಟ್ ಡೇಟೆಡ್ ವಾಹನಗಳನ್ನ ನೀಡಿದ್ದರಿಂದ ವ್ಯಾಪಾರದಲ್ಲಿ ನಷ್ಠ ಉಂಟಾಗಿರುವುದಾಗಿ ದಾಖಲಾದ ದೂರಿನಲ್ಲಿ ಆರೋಪಿಸಲಾಗಿದೆ. 


ಡೀಲರ್ ಶಿಪ್ ಬಗ್ಗೆ ತಪಾಸಣೆ ಮಾಡುವ ವೇಳೆ ಸಂಸ್ಥೆಯು ಸಂಸ್ಥೆಯು ಪತ್ರವ್ಯವಹಾರ ಮಾಡಿ ಡೀಲರ್ ಶಿಪ್ ನ್ನ ರದ್ದು ಮಾಡಿದೆ.  ಒಟ್ಟು 30000000/- ರೂ (ಮೂರು ಕೋಟಿ ರೂ)ಗಳು ನಷ್ಟವನ್ನು ಮಾಡಿರುವ ಆರೋಪದ ಅಡಿ ಐಷರ್ ಮೋಟಾರ್ಸ್ ಲಿಮಿಟೆಡ್ ನ ಕೆಲಸಗಾರರಾದ ಸುನಿಲ್ ರಾವ್ ಇಂಟರ್ನಲ್ ಆಡಿಟರ್, ಬಿನೋಯ್ ಎ ವಿಜಯನ್ ಡೀಲರ್ ಡೆವಲಪ್ ಮೆಂಟ್ ಹೆಡ್, ಶ್ರೀನಾಥ್ ಕಮಲ್ಪುರಕ ಬಿಸನೆಸ್ ಹೆಡ್, ಕಾರ್ತಿಕ್ ಲೀಗಲ್ ಟೀಮ್, ಸತೀಶ್ ರಾವ್ ಡಿ.ಎಸ್ ರಿಜನಲ್ ಬಿಸ್ನೆಸ್ ಮ್ಯಾನೇಜರ್, ಉಮಾಕಾಂತ ಜಾದವ್ ಏರಿಯಾ ಸೇಲ್ಸ್ ಮ್ಯಾನೇಜರ್, ಆಶೋಕ ಮಾಲಗಿ ರಿಜಿನಲ್ ಸರ್ವಿಸ್ ಮ್ಯಾನೇಜರ್, ಅರವಿಂದ ಟೆರಿಟೊರಿ ಸರ್ವೀಸ್ ಮ್ಯಾನೇಜರ್, 


ವಿಜಯಕುಮಾರ್ ಜಿ ಟಿಎಸ್ ಎಂ, ನೆಲ್ಸನ್ ಪ್ರಭು ಡೀಲರ್ ಡೆವಲಪಮೆಂಟ್,ಅಶ್ವಿನ್ ಪ್ರೇಮ್ ಡೀಲರ್ ಡೆವಲಪ್ ಮೆಂಟ್ ಟೀಂ, ಲಿಜಿನ್ ರಾಜ ಲೀಡ್ ಡೀಲರ್ ಡೆವಲಪಮೆಂಟ್ ರವರು ಸೇರಿ ಒಟ್ಟು 12 ಜನರ ವಿರುದ್ಧ ಪಿಸಿಆರ್ ಮೂಲಕ ದೂರು ದಾಖಲಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು