ಮುಂದಿನ ವರ್ಷದಿಂದ 20 ಸಾವಿರ ಸರ್ಕಾರಿ ಮಕ್ಕಳಿಗೆ ಉಚಿತ ನೀಟ್ ಪರೀಕ್ಷೆ ತರಬೇತಿ-ಮಧು ಬಂಗಾರಪ್ಪ

ಸುದ್ದಿಲೈವ್/ಸೊರಬ

ಸೊರಬದ ಪೊಲೀಸ್ ವಸತಿ ಉದ್ಞಾಟನೆಗೆ ಗೃಹಸಚಿವ ಡಾ.ಪರಮೇಶ್ವರ್ ಶಿವಮೊಗ್ಗಕ್ಕೆ ಫ್ಲೈಟ್ ನಲ್ಲಿ ಬಂದು ವಾಪಾಸಾಗಿದ್ದಾರೆ. ಇಲ್ಲಿ ಬರಬೇಕೆಂಬ ಆಸೆ ಅವರಿಗೆ ಇತ್ತು‌ ಎಂದು ವೇದಿಕೆ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಅವರು ಸೊರಬದ ಪೊಲೀಸ್ ವಸತಿ ಸಮುಚ್ಚಾಯದ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಬೆಳಿಗ್ಗೆ ಬೆಂಗಳೂರಿನಿಂದ ಬೈರೋಡ್ ಬಂದೆ ಅವರಿಗೂ ರಸ್ತೆ ಮಾರ್ಗದಲ್ಲಿ ಬರಲು ಹೇಳಿದ್ದರೆ ಚೆನ್ನಾಗಿರುತ್ತಿತ್ತು. ಆದೆರೆ ಶಿವಮೊಗ್ಗದ ವರೆಗೆ ಬಂದು ಫ್ಲೈಟ್ ಲ್ಯಾಂಡ್ ಆಗದ ಕಾರಣ ಬೆಂಗಳೂರಿಗೆ ಹೋಗಿದ್ದಾರೆ ಎಂದು ನಗೆ ಬೀರಿದರು.

ಕೆಲ ಘೋಷಣೆಯನ್ನ ಇಂದು ಗೃಹ ಸಚಿವರು ಮಾಡಲಿದ್ದರು. ಗೃಹಸಚಿವರು ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ. ಪೊಲೀಸರು ಸುಸಜ್ಜಿತವಾಗಿ ಜೀವನ ಮಾಡಬೇಕು. ಹಾಗಾಗಿ ವಸತಿ ಸಮುಚ್ಚಾಲಯ ಅಗತ್ಯವಿದೆ. ಸಾಗರದಲ್ಲಿ ಶಾಸಕ ಬೇಳೂರು ಬಂದ ನಂತರ ಉದ್ಘಾಟಿಸೋಣ ಎಂದರು.

ವೇದಿಕೆ ಮೇಲೆ ಎಸ್ಪಿ ಅವರಿಗೆ ಗಾಂಜಾ ಮತ್ತು ಮಾದಕ ವಸ್ತುಗಳ ಸೇವನೆ ಮಾರಾಟವನ್ನ ಹತೋಟಿ ತರಲು ಸೂಚಿಸಿದ ಸಚಿವರು. ಅರ್ಜೆಂಟ್ ಆಗಿ ಹಣ ಮಾಡಲು ಹೊರಟು ಸಮಾಜ ಘಾತುಕರಾಗಬೇಡಿ ಎಂದು ಸಾರ್ವಜನಿಕರಲ್ಲೂ ಮನವಿ ಮಾಡಿಕೊಂಡರು.

ವೇದಿಕೆಯ ಮೇಲೆ ಗೃಹ ಸಚಿವರನ್ನ ಐದಾರು ಬಾರಿ ನೆನಪಿಸಿಕೊಂಡ ಸಚಿವರು ವರದ ನದಿಗೆ 6 ಬ್ಯಾರೇಜ್ ನಲ್ಲಿ 5 ಬ್ಯಾರೇಜ್ ಗೆ ಅನುಮತಿ ದೊರೆತಿದೆ. 50ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಮಳೆಗಾಲ ಮುಗಿದ ಮೇಲೆ ಬ್ಯಾರೇಜ್ ಕಾಮಗಾರಿ ಆರಂಭವಾಗಲಿದೆ ಎಂದರು.

ಶರಾವತಿಯ ನದಿಯಿಂದ ಸೊರಬ, ಆನವಟ್ಟಿ, 586 ಕೋಟಿ 354 ಹಳ್ಳಿಗಳಿಗೆ ನೀರುಣಿಸುವ ಕಾಮಗಾರಿ ಈ ವರ್ಷದಲ್ಲಯೇ ಆರಂಭಿಸಲಾಗುವುದು. ಇದರಿಂದ 365 ದಿನ ಸೊರಬದ ಎಲ್ಲಾ ಮನೆಗಳಿಗೆ ನೀರು ಒದಗಿಸಲಾಗುವುದು ಎಂದರು.

ವಿಧಾನ ಸಭ ಕ್ಷೇತ್ರವಾದ ಸೊರಬದಲ್ಲಿ ಇಡೀ ಏಷ್ಯದಲ್ಲಿಯೇ ಹೈಯಸ್ಟ್ ಕೆರೆಗಳಿವೆ. 1983 ಕೆರೆಗಳು ಇವೆ. ಈ ಬಾರಿ ಇದರಲ್ಲಿ 80-90 ಕೆರೆ ತುಂಬಿಲ್ಲ. ದಂಡಾವತಿ ಮೂಲಕ ಕೆರೆ ತುಂಬಿಸುವ ಕೆಲಸವೂ ನಡೆಯಲಿದೆ ಎಂದರು.

2015 ರ ಮೇಲೆ ಭೂಸಾಗುವಳಿಮಾಡಿದ್ರೆ ಅವರನ್ನ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದಿನ ಸಗುವಳಿಯನ್ನ ರಕ್ಷಿಸಲಸಗುವುದು. ಜುಲೈನಲ್ಲಿ ಟೆಂಡರ್ ಮಾಡಲಾಗುತ್ತಿದೆ. ಗ್ರಾಪಂ ಮಟ್ಟಕ್ಕೆ ನಾನೆ ಬರುವೆ. ನೀವುಹುಡುಕಿಕೊಂಡು ಬರಬೇಡಿ ಎಂದರು.

ಮುಂದಿನ ವರ್ಷದಿಂದ 20 ಸಾವಿರ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದರು.

ಸೊರಬ ಕಾರ್ಗಲ್, ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ಪೊಲೀಸ್ ವಸತಿ ಸಮುಚ್ಚಾಯ ಲೋಕಾರ್ಪಣ ಆಗಿದೆ. ಒಟ್ಟು 132 ಕ್ವಾಟ್ರಸ್ ಗಳನ್ನ 80 ಕೋಟಿ ರೂ.ನಲ್ಲಿ ನಿರ್ಮಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಮಿಥುನ್ ಕುಮಾರ್, ಪೊಲೀಸ್ ಹೌಸಿಂಗ್ ಕಾರ್ಪರೇಷನ್ ಎಂಡಿ ಡಾ.ರಾಮಚಂದ್ರರಾವ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close