ಸುದ್ದಿಲೈವ್/ಶಿವಮೊಗ್ಗ
ಭದ್ರಾವತಿಯ ಜಿಂಕ್ ಲೈನ್ ನಿವಾಸಿ, ಕೆ.ಕಲ್ಯಾಣ್ ಜೊತೆ ಸಹಾಯಕ ಬರಹಗಾರಗಾರನಾಗಿ ಕೆಲಸ ಮಾಡಿಕೊಂಡಿದ್ದ ಹರ್ಷಪ್ರಿಯ ಎಂಬುವರ ಚೊಚ್ಚಲ ನಿರ್ದೇಶಕ ಸಿನಿಮಾ ಹೆಜ್ಜಾರು ಸಿನಿಮಾ ಜು.19 ರಂದು ಬಿಡುಗಡೆಯಾಗಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿನಿಮಾದ ನಿರ್ದೇಶಕ ಹಾಗೂ ನಾಯಕನಟ ಹರ್ಷಪ್ರಿಯ ಈ ಹಿಂದೆ ಧಾರವಾಹಿಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕೃಷ್ಣ ರುಕ್ಮಣಿ, ಅಂಮೃತವಾಹಿನಿಯಲ್ಲಿ ಫಿಕ್ಷನ್ ಹೆಡ್ ಆಗಿ ಕೆಲಸ ಮಾಡಿ ಅವರು ಹೆಜ್ಜಾರುವಿನಲ್ಲಿ ಮುಖ್ಯನಿರ್ದೇಶಕನಾಗಿ ಹಾಗೂ ನಾಯಕನಟರಾಗಿ ಕೆಲಸ ಮಾಡಿದ್ದಾರೆ.
ಖಾಸಗಿ ಪುಟ ಹಾಗೂ ಹಿಂದಿಯ ವೈ ನ ಹೀರೋಯಿನ್ ಆಗಿದ್ದ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಹೆಜ್ಜಾರುವಿನಲ್ಲಿ ನಾಯಕಿ ನಟರಾಗಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತೊಂದಿಷ್ಟು ಜನ ಪಾತ್ರಧಾರಿಗಳಾಗಿದ್ದಾರೆ.
ಒಬ್ಬರ ಜೀವನದಲ್ಲಿ ನಡೆದ ಘಟನೆ ಮತ್ತೊಬ್ಬರ ಜೀವನದಲ್ಲಿ ಸಂಭವಿಸುವ ಸಾಧ್ಯತೆಗಳ ಬಗ್ಗೆ ಸಿನಿಮಾ ಕಥೆಗಳಾಗಿದೆ. ಇದನ್ನ ಪ್ಯಾರಲೆಲ್ ಲೈಫ್ ಕಥೆ ಎನ್ನಬಹುದು 80% ಮಂಗಳೂರು 20% ಬೆಂಗಳೂರಿ ನಲ್ಲಿ ಶೂಟಿಂಗ್ ನಡೆದಿದೆ. ಸಿನಿಮಾದಲ್ಲಿ 80% ಮಳೆ ಇರುತ್ತೆ
ಮೂರು ಹಾಡುಗಳಿವೆ. ಒಂದು ಹಾಡು ಪೂರ್ಣಚಂದ್ರ ತೇಜಸ್ವಿಯವರದ್ದಾಗಿದೆ. ಟ್ರ್ಯಾಜಡಿ ನಡೆದವರ ಜೀವನದಲ್ಲಿ ಹಾಗೆ ಉಳಿಯುತ್ತದೆ. ಕಾಲ್ಪನಿಕ ಸಿನಿಮಾವಾಗಿದೆ. 3.80 ಕೋಟಿ ಸಿನಿಮಾ ಇದಾಗಿದೆ. ಜು.19 ರಂದು ಸಿನಿಮಾ ಬಿಡುಗಡೆ 80 ಮಲ್ಟಿ ಕಾಂಪ್ಲೆಕ್ಸ್ ನಲ್ಲಿ ಬಿಡುಗಡೆ ಆಗಲಿದೆ.
ಕನ್ನಡದ ಮೊಟ್ಟ ಮೊದಲ ಪ್ಯಾರಲರ್ ಲೈಫ್ ಸಿನಿಮಾ ಹೆಜ್ಜಾರು” ತನ್ನ ಮೊದಲ ಟೀಸರ್ ಮೂಲಕವೇ ಇಂಡಸ್ಟ್ರಿಗೆ ಒಂದು ಒಳ್ಳೆಯ ಕಂಟೆಂಟ್ ಸಿನಿಮಾ ಬರುತ್ತಿರುವ ಸೂಚನೆಯನ್ನು ದೊಡ್ಡ ಮಟ್ಟದಲ್ಲಿಯೇ ಪ್ರೇಕ್ಷಕರಿಗೆ ಕೊಟ್ಟಿದೆ ಎಂದರು.
ಇದನ್ನೂ ಓದಿ-https://suddilive.in/archives/18916